ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ 17 ಜನರು ಮುಟ್ಠಾಳರು: ಶಾಸಕ ಬೇಳೂರು ಗೋಪಾಲಕೃಷ್ಣ

Prasthutha|

ಬೆಂಗಳೂರು: ಅಧಿಕಾರದ ಆಸೆಗಾಗಿ ಸರಕಾರ ಬೀಳಿಸಿ ಕಾಂಗ್ರೆಸ್ ನಿಂದ ಬಿಜೆಪಿಗೆ ಕೆಲವರು ಹೋದ್ರಲ್ಲಾ. ಹೀಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ 17 ಜನರು ಕೂಡ ದಡ್ಡ ಮುಟ್ಠಾಳರು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ಧಾಳಿ ಹೇಳಿದ್ದಾರೆ.

- Advertisement -

ಇಂದು ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಭದ್ರವಾಗಿರೋ ಸರ್ಕಾರ ಉರುಳಿಸೋದಕ್ಕೆ ಬಿಜೆಪಿಯವರು ದಿನಕ್ಕೊಂದು ಮಾಡ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಉರುಳಿಸೋದಕ್ಕೆ, ಡಿಕೆಶಿ ತಲೆ ದಂಡ ಮಾಡೋದಕ್ಕೆ ಏನೆಲ್ಲಾ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು.

ಬಿಜೆಪಿ ನಾಯಕರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸೇರಿಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸೋದಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೇ ಅದು ಸಾಧ್ಯವಿಲ್ಲ. ಬಿಜೆಪಿಯವರು ಎಷ್ಟೇ ಆಮಿಷ ಒಡ್ಡಿದರೂ ನಾವು ಎಲ್ಲೂ ಹೋಗಲ್ಲ. ಈ ಹಿಂದೆ 17 ಜನ ಮುಟ್ಠಾಳರು ಅಧಿಕಾರಕ್ಕಾಗಿ ಹೋಗಿರಬಹುದು. ಈಗ ಯಾರೂ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋಗಲ್ಲ ಎಂದ ಗೋಪಾಲ ಕೃಷ್ಣ,  ಹಿಂದೆ ಬಿಎಸ್ ವೈ ಮತ್ತು ಮಕ್ಕಳು 40 ಕಮೀಷನ್ ಮಾಡಿಕೊಂಡರು ಎಂದು ಆರೋಪಿಸಿದರು.

Join Whatsapp