ಹುಲಿ ಉಗುರು ನಕಲಿಯಾದರೂ ಹಾಕಿಕೊಳ್ಳಬಾರದು: ಸಚಿವ ಈಶ್ವರ್‌ ಖಂಡ್ರೆ

Prasthutha|

ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣ ಸದ್ದು ಹೆಚ್ಚಾಗಿದ್ದು ನಕಲಿನೂ ಹಾಕಿಕೊಳ್ಳಬಾರದು. ಅದನ್ನು ಹಾಕಿಕೊಂಡರೆ ಬೇರೆಯವರಿಗೆ ಪ್ರಚೋದನೆ ಆಗುತ್ತೆ. ಅದರಿಂದಾಗಿ ಪ್ರಾಣಿಗಳ ಹತ್ಯೆಯ ಪ್ರಯತ್ನಗಳು ಆಗುತ್ತವೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

- Advertisement -

ವಿಕಾಸಸೌಧದಲ್ಲಿ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಹುಲಿ ಉಗುರಿನ ನಕಲಿ ಪೆಂಡೆಂಟ್ ಆದರೂ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ. ನಕಲಿಯಿಂದಲೂ ಪ್ರೇರಣೆ ಆಗುತ್ತದೆ. ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆಯಲ್ಲಿ ಇಲ್ಲ. ಆದರೆ, ನಕಲಿ ಪೆಂಡೆಂಟ್ ಗಳನ್ನು ಯಾರು ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ ಎಂದರು.

ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ. ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Join Whatsapp