ಎಲ್ಲಾ ಶಾಲೆಗಳನ್ನು ವಿದ್ಯಾಂಜಲಿ 2.0 ಪೊರ್ಟಲ್ ನಲ್ಲಿ ನೋಂದಣಿ ಮಾಡಲು ಶಿಕ್ಷಣ ಇಲಾಖೆ ಸೂಚನೆ

Prasthutha|

ಬೆಂಗಳೂರು : ಎಲ್ಲಾ ಶಾಲೆಗಳನ್ನು ವಿದ್ಯಾಂಜಲಿ 2.0 ಪೊರ್ಟಲ್ ನಲ್ಲಿ ನೋಂದಣಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

- Advertisement -

ರಾಜ್ಯ ಯೋಜನಾ ನಿರ್ದೇಶಕರು , ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಹಿಂದಿನ ಸುತ್ತೋಲೆಗಳನ್ವಯ ಈಗಾಗಲೇ ವಿದ್ಯಾಂಜಲಿ 2.0 ಕಾರ್ಯಕ್ರಮದ ಪೋರ್ಟಲ್ ನಲ್ಲಿ ರಾಜ್ಯದ 44880 ಶಾಲೆಗಳು ನೋಂದಾಯಿಸಿಕೊಂಡಿರುತ್ತವೆ. ಭಾರತ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ ಎಲ್ಲಾ ಸರ್ಕಾರಿ /ಅನುದಾನಿತ ಪ್ರಾಥಮಿಕ/ಪ್ರೌಢಶಾಲೆಗಳನ್ನು ಶೇಕಡ100 ರಷ್ಟು ವಿದ್ಯಾಂಜಲಿ 2.0 ಪೋರ್ಟಲ್ ನಲ್ಲಿ ನೋಂದಣಿ ಮಾಡುವಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ. ಅದರಂತೆ ರಾಜ್ಯದ ಎಲ್ಲಾ ಜಿಲ್ಲಾ ನೋಡಲ್ ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಿ ಶಾಲೆಗಳ ನೋಂದಾವಣಿಯನ್ನು ವಿದ್ಯಾಂಜಲಿ 2.0ರಲ್ಲಿ ಶೇಕಡ100 ರಷ್ಟು ಸಾಧಿಸಬೇಕು ಹಾಗೂ ಶಾಲೆಗಳ ಅವಶ್ಯಕತೆ ಪೋರ್ಟಿನಲ್ಲಿ http://vidyanjali.education.gov.in ಲಿಂಕ್ ನ್ನು ಬಳಸಿ ನೋಂದಣಿ ಮಾಡುವ ಬಗ್ಗೆ ಶಾಲಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲೆಗಳ ನೋಂದಾವಣಿಯನ್ನು ವಿದ್ಯಾಂಜಲಿ 2.0 ಶೇಕಡ100 ರಷ್ಟುನ್ನು ನವೆಂಬರ್ ತಿಂಗಳ ಒಳಗೆ ಪೂರ್ಣ ಗೊಳಿಸಬೇಕು. ವಿದ್ಯಾಂಜಲಿ ಪೋರ್ಟಲ್ನ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡುವ ಸಲುವಾಗಿ ಪ್ರತಿ ಶಾಲೆಗಳಲ್ಲಿ ವಿದ್ಯಾಂಜಲಿ ಜಾಹಿರಾತು ಫಲಕಗಳನ್ನು ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.