ಆರ್ಥಿಕ ರಾಜತಾಂತ್ರಿಕತೆಯನ್ನು ಉತ್ತೇಜಿಸಲು OIC ರಾಷ್ಟ್ರಗಳೊಂದಿಗೆ ಸಂಬಂಧ: ಬಿಎಂ ಫಾರೂಕ್

Prasthutha|

ನವದೆಹಲಿ: ಆರ್ಥಿಕ ರಾಜತಾಂತ್ರಿಕತೆಯನ್ನು ಉತ್ತೇಜಿಸಲು ಒಐಸಿ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಬೇಕು ಎಂದು ಇಂಡಿಯಾ ಒಐಸಿ ಟ್ರೇಡ್ ಕೌನ್ಸಿಲ್ ಅಧ್ಯಕ್ಷ ಬಿಎಂ ಫಾರೂಕ್ ಕರೆ ನೀಡಿದ್ದಾರೆ.

- Advertisement -

ದೆಹಲಿಯ ನಿರ್ಯಾತ್ ಭವನದಲ್ಲಿ ನಡೆದ ಒಐಸಿ ವ್ಯಾಪಾರ ಸಮ್ಮೇಳನವು ಭಾರತ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ರಾಷ್ಟ್ರಗಳಾದ ಚಾಡ್, ನೈಜರ್, ಸುಡಾನ್ ಮತ್ತು ಬಹ್ರೇನ್ ನ ಪ್ರತಿನಿಧಿಗಳನ್ನು ಒಳಗೊಂಡಿತ್ತು.

ಬೆಂಗಳೂರಿನ ಫಿಜಾ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಇಂಡಿಯಾ ಒಐಸಿ ಟ್ರೇಡ್ ಕೌನ್ಸಿಲ್ ಅಧ್ಯಕ್ಷ ಬಿಎಂ ಫಾರೂಖ್ ಮಾತನಾಡಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಾಮೂಹಿಕ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದರು. ಸುಸ್ಥಿರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸುವಲ್ಲಿ ನವೀಕರಿಸಬಹುದಾದ ಇಂಧನದ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ಭಾರತ-ಒಐಸಿ ಸಂಬಂಧಗಳನ್ನು ಬಲಪಡಿಸುವ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.

- Advertisement -


ತಮ್ಮ ಸುದೀರ್ಘ 25 ವರ್ಷಗಳ ವ್ಯವಹಾರ ವೃತ್ತಿಜೀವನದಲ್ಲಿ, ವಿವಿಧ ವ್ಯವಹಾರ ಸಂಸ್ಥೆಗಳ ಅಡಿಯಲ್ಲಿ ವಿದೇಶಗಳಿಂದ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಭಾರತದಾದ್ಯಂತ 2000 ಮೆಗಾವ್ಯಾಟ್ ಗಿಂತ ಹೆಚ್ಚು ಪವನ ವಿದ್ಯುತ್ ಯೋಜನೆಗಳನ್ನು ಟರ್ನ್ ಕೀ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ.

Join Whatsapp