ತುಂಬೆ: ಸ್ವಚ್ಛ ಪರಿಸರದ ಬಗ್ಗೆ ಅರಿವು ಹಾಗೂ ಸ್ವಚ್ಛ ಅಭಿಯಾನ ಕಾರ್ಯಕ್ರಮ

Prasthutha|

ಮಂಗಳೂರು: ತುಂಬೆಯಲ್ಲಿ ಸ್ವಚ್ಛ ಪರಿಸರದ ಬಗ್ಗೆ ಅರಿವು ಹಾಗೂ ಸ್ವಚ್ಛ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾಡಿದರು. ಎನ್ ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛ ಪರಿಸರದ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.

- Advertisement -


ಗ್ರಾ. ಪಂ. ಅಧ್ಯಕ್ಷ ಪ್ರವೀಣ್ ಬಿ ತುಂಬೆ ಈ ಸಂದರ್ಭದಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಕಸ ಎಸೆಯುವ ದುಷ್ಪರಿಣಾಮದ ಬಗ್ಗೆ ಹಾಗೂ ಕೊಳಚೆ ನೀರು ಮಳೆ ನೀರು ಹೋಗುವ ಚರಂಡಿಗೆ ಬಿಡುವುದರಿಂದ ಆಗುವ ಅನಾಹುತಗಳ ಬಗ್ಗೆ ತಿಳಿ ಹೇಳಿದರು. ಬಟ್ಟೆ ಚೀಲ ಬಳಸಿ ಪರಿಸರ ಉಳಿಸಿ, ಭೂಮಿ ನಮ್ಮ ಸ್ವತ್ತು ಅಲ್ಲ ನಾವು ಭೂಮಿಯ ಸ್ವತ್ತು ಎಂದು ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸಿದರು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಪಂಚಾಯತ್ ಸದಸ್ಯರಾದ ಗಣೇಶ್ ಸಾಲ್ಯಾನ್ , ಇಬ್ರಾಹಿಂ ವಳವೂರು, ಜಯಂತಿ ಶ್ರೀಧರ, ಶ್ರೀಮತಿ ಜಯಂತಿ ಕೇಶವ, ಶಶಿಕಲಾ ಮನೋಹರ ಕೊಟ್ಟಾರಿ, ಜೆಸಿಂತಾ ಡಿಸೋಜ, ನಿವೃತ್ತ ಎಮ್.ಆರ್.ಪಿ.ಎಲ್ ಅಧಿಕಾರಿ ಸದಾಶಿವ ಡಿ ತುಂಬೆ, ಇರ್ಫಾನ್ ತುಂಬೆ, ಮುಹಮ್ಮದ್ ಅಲ್ತಾಫ್ ತುಂಬೆ, ಅಶೋಕ ಕೊಂಡಾಣ, ರಾಜೀವ ಗಾಣದಲಚ್ಚಿಲ್, ಜಾನೇಟ್ ಸಿಕ್ವೇರಾ ಉಪನ್ಯಾಸಕರು, ಜೆಸನ್ ಕರ್ಕಡ, ಸಂಕೇತ್ ಬಂಗೇರಾ,ಹಾಗೂ ಸಿಬ್ಬಂದಿಗಳು, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ , ಗ್ರಾ ಪಂ ಲೆಕ್ಕ ಸಹಾಯಕಿ ಚಂದ್ರಕಲಾ, ಮಾಲತಿ ತುಂಬೆ, LCRP, ವಿದ್ಯಾ ರಾಮಲ್ ಕಟ್ಟೆ, ಪಂಚಾಯತ್ ಸಿಬ್ಬಂದಿಗಳಾದ ಪ್ರಮೀಳಾ, ಬಬಿತ, ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp