ಬಿಸಿಲು ತಾಳಲಾರದೇ ಮೂವರು ಸಬ್ ಇನ್ಸ್ ಪೆಕ್ಟರ್ ಗಳ ಸಾವು

Prasthutha|

ಚಂದೌಲಿ: ಬಿಸಿಗಾಳಿಗೆ ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಚಾಂದೌಲಿಯಲ್ಲಿ ನಡೆದಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

- Advertisement -


ಬಾಬುರಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ರವೀಂದರ್ ಸಿಂಗ್ ಮತ್ತು ಚಂದೌಲಿ ಪೊಲೀಸ್ ಲೈನ್ ನಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ರಾಮಾಶ್ರಯ ಅವರು ಅನಾರೋಗ್ಯದ ಕಾರಣ ಮಂಗಳವಾರ ಮೃತಪಟ್ಟಿದ್ದಾರೆ. ಇನ್ನೊಂದು ಕಡೆ ಬಲರಾಂಪುರದಲ್ಲಿ ಸಿಎಂ ಕಾರ್ಯಕ್ರಮಕ್ಕೆ ನಿಯೋಜಿತ ಆಗಿದ್ದ ಸಬ್ ಇನ್ಸ್ ಪೆಕ್ಟರ್ ಸಹ ಮೃತಪಟ್ಟಿದ್ದಾರೆ.


ಸೋಮವಾರ ಸಂಜೆ ಗಸ್ತಿನಲ್ಲಿದ್ದಾಗ ಇನ್ಸ್ ಪೆಕ್ಟರ್ ರವೀಂದ್ರ ಸಿಂಗ್ ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ತಕ್ಷಣ ಅವರನ್ನು ವಾರಾಣಸಿಗೆ ಕರೆದೊಯ್ಯಲಾಗಿದೆಯಾದರೂ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ವಾಸ್ತವವಾಗಿ ರಾಜ್ಯದಲ್ಲಿ ಬೀಸುತ್ತಿರುವ ಬಿಸಿ ಗಾಳಿ, ಹೆಚ್ಚುತ್ತಿರುವ ತಾಪಮಾನದಿಂದ ಈ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ. ಬಿಸಿಗಾಳಿಯ ಅಬ್ಬರಕ್ಕೆ ಸಾಮಾನ್ಯ ಜನರು ತೊಂದರೆಗೀಡಾಗಿದ್ದಾರೆ. ಹಿಟ್ ಸ್ಟ್ರೋಕ್ ಅನ್ನು ತಪ್ಪಿಸಲು ಜನರು ತಮ್ಮ ಮನೆಗಳಲ್ಲೇ ಇರುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.