SDPI ಪುದು ಗ್ರಾಮ ಸಮಿತಿ ವತಿಯಿಂದ ಫರಂಗಿಪೇಟೆ, ಅಮೆಮ್ಮಾರ್, ಕುಂಜತ್ಕಳದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ

Prasthutha|

ಫರಂಗಿಪೇಟೆ: ’15 ನೇ ವರ್ಷದೆಡೆಗೆ ಸ್ವಾಭಿಮಾನ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳು’ ಎಂಬ ದ್ಯೇಯದೊಂದಿಗೆ SDPI ಪಕ್ಷ 15 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು SDPI ಪುದು ಗ್ರಾಮ ಸಮಿತಿ ವತಿಯಿಂದ ಫರಂಗಿಪೇಟೆ, ಅಮೆಮ್ಮಾರ್, ಕುಂಜತ್ಕಳ ಬೂತ್ ಸಮಿತಿಯಲ್ಲಿ ದ್ವಜಾರೋಹಣ ಮತ್ತು ಸಂದೇಶ ನೀಡುವ ಕಾರ್ಯಕ್ರಮ ಬುಧವಾರ ನಡೆಯಿತು.

- Advertisement -


SDPI ಪುದು ಗ್ರಾಮ ಸಮಿತಿ ಉಪಾಧ್ಯಕ್ಷ ಲೆತೀಫ್ ಸುಜೀರ್ ಫರಂಗಿಪೇಟೆಯಲ್ಲಿ ದ್ವಜಾರೋಹಣಗೈದರು, ಕುಂಜತ್ಕಳದಲ್ಲಿ ಗ್ರಾಮ ಪಂಚಾಯತ್ ಸದಸ್ಯ ನಝೀರ್ ಕುಂಜತ್ಕಳ ದ್ವಜಾರೋಹಣಗೈದರು.


ಅಮೆಮ್ಮಾರ್ ನಲ್ಲಿ ಬೂತ್ ಸಮಿತಿ ಅಧ್ಯಕ್ಷ ಹಮೀದ್ ದ್ವಜಾರೋಹಣಗೈದರು. ಜಿಲ್ಲಾ ಸಮಿತಿ ಸದಸ್ಯ ಖಾದರ್ ಫರಂಗಿಪೇಟೆ ಫರಂಗಿಪೇಟೆಯಲ್ಲಿ ಸಂದೇಶ ನೀಡಿದರು, ಪುದು ಗ್ರಾಮ ಪಂಚಾಯತ್ ಸದಸ್ಯ ನವೀನ್ ಸಾಲ್ದಾನ, ಗ್ರಾಮ ಸಮಿತಿ ಸದಸ್ಯರಾದ ಬಶೀರ್ ಫರಂಗಿಪೇಟೆ, ಮುಖಂಡರಾದ ಸುಲೈಮಾನ್ ಉಸ್ತಾದ್, ಫರಂಗಿಪೇಟೆ ಬೂತ್ ಸಮಿತಿ ಅಧ್ಯಕ್ಷ ಜಮಾಲುದ್ದೀನ್, ಕಾರ್ಯದರ್ಶಿ ಆಶಿಫ್, ಕುಂಜತ್ಕಳ ಬೂತ್ ಸಮಿತಿ ಅಧ್ಯಕ್ಷ ಸಿರಾಜಿ, ಕಾರ್ಯದರ್ಶಿ ಹಬೀಬ್ ಮತ್ತಿತರರು ಉಪಸ್ಥಿತರಿದ್ದರು