ಮಂಗಳೂರು: ಎಂಡಿಎಂಎ ಸಾಗಿಸುತ್ತಿದ್ದ ಮೂವರ ಬಂಧನ

Prasthutha|

ಮಂಗಳೂರು: ಎಂಡಿಎಂಎ ಸಾಗಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದು, 9 ಲಕ್ಷ ರೂಪಾಯಿ ಮೌಲ್ಯದ 170 ಗ್ರಾಂ ಎಂಡಿಎಂಎ, ರಿಟ್ಜ್ ಕಾರು, 6 ಮೊಬೈಲ್, ಡಿಜಿಟಲ್ ಮಾಪಕ ವಶಕ್ಕೆ ಪಡೆಯಲಾಗಿದೆ.

- Advertisement -

ಮೂಡುಶೆಡ್ಡೆಯ ಇಮ್ರಾನ್, ಮಂಜನಾಡಿಯ ಅಬ್ದುಲ್ ಬಶೀರ್ ಅಬ್ಬಾಸ್,​ ಉಡುಪಿಯ ಬಡಗಬೆಟ್ಟು ನಿವಾಸಿ ಅಮ್ಜತ್ ಖಾನ್ ಬಂಧಿತರು.

ಬೆಂಗಳೂರಿನಲ್ಲಿ MDMA ಖರೀದಿಸಿ ಮಂಗಳೂರಿಗೆ ತಂದಿದ್ದು, ಬೊಂದೆಲ್ ಪಡುಶೆಡ್ಡೆ ಪ್ರದೇಶದಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ.

- Advertisement -

ಡ್ರಗ್ಸ್​ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಸಿಸಿಬಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ.

ಕ್ರಿಮಿನಲ್ ಹಿನ್ನೆಲೆಯ ಇಮ್ರಾನ್ ವಿರುದ್ಧ ಈಗಾಗಲೇ 9 ಕೇಸ್ ಇದೆ. ವಾರದ ಹಿಂದಷ್ಟೇ ಜಾಮೀನಿನ ಮೇಲೆ ಜೈಲ್​ನಿಂದ ಹೊರಬಂದಿದ್ದ.

ಡ್ರಗ್ಸ್​ ಜಪ್ತಿ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Join Whatsapp