ಹಳಿ ತಪ್ಪಿದ ಗುವಾಹಟಿ – ಬಿಕನೇರ್ ನಡುವಿನ ಎಕ್ಸ್ಪ್ರೆಸ್ ರೈಲು;ಮೂವರು ಸಾವು

Prasthutha|

ಕೋಲ್ಕತ್ತ: ಗುವಾಹಟಿ – ಬಿಕನೇರ್ ನಡುವಿನ ಎಕ್ಸ್ಪ್ರೆಸ್ ರೈಲು ಪಶ್ಚಿಮ ಬಂಗಾಳದ ದೊಮೊಹಾನಿ ಬಳಿ ಹಳಿ ತಪ್ಪಿದೆ.ಇಂದು ಸಂಜೆ ಐದು ಗಂಟೆಯ ಹೊತ್ತಿಗೆ ದುರ್ಘಟನೆ ಸಂಭವಿಸಿದೆ.

- Advertisement -

‘ಹಠಾತ್ತನೇ ರೈಲು ಅಲುಗಾಡಿದ್ದು ಅನುಭವಕ್ಕೆ ಬಂತು. ಅದರ ಬೆನ್ನಿಗೇ ಹಲವು ಬೋಗಿಗಳು ಉರುಳಿಬಿದ್ದು ನಮ್ಮ ಗಮನಕ್ಕೆ ಬಂತು ಎಂದು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ, ‘ಸಂಜೆ ಐದು ಗಂಟೆಯಲ್ಲಿ ಅಪಘಾತ ಸಂಭವಿಸಿದ್ದು, 12 ಬೋಗಿಗಳು ಹಾನಿಗೀಡಾಗಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. . ಸದ್ಯದ ಮಾಹಿತಿ ಪ್ರಕಾರ ಮೂವರು ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

Join Whatsapp