ಡೆನ್ಮಾರ್ಕ್ | ಕೋಪನ್ ಹ್ಯಾಗನ್ ಶಾಪಿಂಗ್ ಮಾಲ್ ಮೇಲೆ ಗುಂಡಿನ ದಾಳಿ; ಕನಿಷ್ಠ ಮೂವರು ಸಾವು

Prasthutha|

ಡೆನ್ಮಾರ್ಕ್: ರಾಜಧಾನಿ ಕೋಪನ್ ಹ್ಯಾಗನ್’ನಲ್ಲಿರುವ ಡೆನ್ಮಾರ್ಕ್’ನ ಅತಿದೊಡ್ಡ ಶಾಪಿಂಗ್ ಮಾಲ್’ನಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ಸುರಿಮಳೆಗೈದಿದ್ದು, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಶಂಕಿತ ಬಂದೂಕುಧಾರಿಯನ್ನು 22 ವರ್ಷದ ಡ್ಯಾನಿಶ್ ಎಂದು ಗುರುತಿಸಲಾಗಿದ್ದು, ಫೀಲ್ಡ್ ಶಾಪಿಂಗ್ ಮಾಲ್ ಬಳಿ ಬಂಧಿಸಲಾಗಿದೆ ಎಂದು ಕೋಪನ್ ಹ್ಯಾಗನ್ ಪೊಲೀಸ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಸೊರೆನ್ ಥಾಮಸ್ಸೆನ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ಬಂಧಿತ ಬಂದೂಕುಧಾರಿಯ ವಿರುದ್ಧ ನರಹತ್ಯೆ ನಡೆಸಿದ ಆರೋಪ ಹೊರಿಸಲಾಗಿದ್ದು, ವಿಚಾರಣೆಗಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

ಘಟನೆಯ ಕುರಿತು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಸೊರೆನ್ ತಿಳಿಸಿದರು.

ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್, ಇದು ಮಾನವೀಯತೆ ಮೇಲಿನ ಕ್ರೂರ ದಾಳಿ ಎಂದು ತಿಳಿಸಿದ್ದಾರೆ.

Join Whatsapp