ಆಟೋಗೆ ಲಾರಿ ಡಿಕ್ಕಿ: 2 ತಿಂಗಳ ಮಗು ಸೇರಿ ಮೂವರ ಮೃತ್ಯು !

Prasthutha|

ಯಾದಗಿರಿ:  ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 2 ತಿಂಗಳ ಮಗು ಸೇರಿ ಮೂವರ ಮೃತಪಟ್ಟ ಘಟನೆ  ತಡರಾತ್ರಿ ಯಾದಗಿರಿ ನಗರದ ಹೊರಭಾಗದ ಮುದ್ನಾಳ್ ಕ್ರಾಸ್‌ನಲ್ಲಿ ನಡೆದಿದೆ.

- Advertisement -

ಲಕ್ಷ್ಮಣ್(26), ಜಯರಾಂ(45) ಹಾಗೂ ಕೃಷ್ಣಾ(2 ತಿಂಗಳು) ಸಾವನ್ನಪ್ಪಿದ್ದವರು ಎಂದು ಗುರುತಿಸಲಾಗಿದೆ.

ದುರ್ಘಟನೆಯಲ್ಲಿ ಆರು ಜನರಿಗೆ ಗಂಭೀರವಾದ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೃತರು ಮುಂಬೈನಿಂದ ಟ್ರೈನ್‌ ಗೆ ಬಂದು ಆಟೋದಲ್ಲಿ ಊರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು , ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp