ಮಾತೃ ಭಾಷೆ ಗುಜರಾತಿಗಿಂತಲೂ ಹಿಂದಿಯನ್ನು ನಾನು ಹೆಚ್ಚಾಗಿ ಪ್ರೀತಿಸುತ್ತೇನೆ : ಅಮಿತ್ ಶಾ

Prasthutha|

ವಾರಾಣಸಿ: ನಾನು ನನ್ನ ಮಾತೃ ಭಾಷೆ ಗುಜರಾತಿಗಿಂತಲೂ ಹಿಂದಿಯನ್ನು ಹೆಚ್ಚಾಗಿ ಪ್ರೀತಿಸುತ್ತೇನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಶನಿವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಭಾರತೀಯ ರಾಜಭಾಷಾ (ಅಧಿಕೃತ ಭಾಷೆ) ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಶಾ ‘ ನಾನು ಗುಜರಾತಿ ಭಾಷೆಗೂ ಮಿಗಿಲಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ಅಧಿಕೃತ ಭಾಷೆಯಾಗಿರುವ ಹಿಂದಿಯನ್ನು ನಾವು ಬಲಪಡಿಸಬೇಕಿದೆ,‘ ಎಂದು ಹೇಳಿದ್ದಾರೆ.

- Advertisement -

ಈ ಹಿಂದೆ ಅಮಿತ್ ಶಾ ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಹಿಂದಿ ಭಾಷೆಯು ಭಾರತವನ್ನು ಬೆಸೆಯುವ ಸಾಮರ್ಥ್ಯ ಹೊಂದಿದೆ. ಹಿಂದಿಯು ಭಾರತವನ್ನು ಜಾಗತಿಕವಾಗಿ ಗುರುತಿಸುವ ಭಾಷೆಯಾಗಬೇಕಾಗಿದೆ.’ ಎಂದು 2019ರಲ್ಲಿಯೂ ಹೇಳಿದ್ದರು.ವಾರಾಣಸಿಯಲ್ಲಿ ನಡೆಯುತ್ತಿರುವ ‘ರಾಜಭಾಷಾ ಸಮ್ಮೇಳನ’ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ಭಾಗವಹಿಸಿದ್ದರು.

Join Whatsapp