ಆರು ದಿನವಾದರೂ ಪತ್ತೆಯಾಗದ ಮೂವರು ಮಕ್ಕಳು; ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಲೆನೋವು

Prasthutha|

ಬೆಂಗಳೂರು: ನಗರದಲ್ಲಿ ಕಲಾಸಿಪಾಳ್ಯದಿಂದ ಒಂದು ವರ್ಷದ ಮಗು ಸೇರಿ ಮೂವರು ಮಕ್ಕಳು ನಾಪತ್ತೆಯಾಗಿದ್ದು ಆರು ದಿನ ಕಳೆದರೂ ಮಕ್ಕಳ ಸುಳಿವು ಸಿಕ್ಕಿಲ್ಲ.

- Advertisement -

ನಗೀನಾ(15) ರುಕ್ಸಾನಾ(5) ಹಾಗೂ ಹಸನ್ (1) ನಾಪತ್ತೆಯಾದ ಮಕ್ಕಳಾಗಿದ್ದು ಅವರಿಗಾಗಿ ಪ್ರಕರಣ ದಾಖಲಿಸಿರುವ ಕಲಾಸಿಪಾಳ್ಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸತತ 6 ದಿನಗಳ ಕಾಲ  ಎಂಟು ಪೊಲೀಸ್ ತಂಡಗಳು 500 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿವೆಯಾದರೂ ಆ ಮೂವರು ಮಕ್ಕಳ ಸುಳಿವು ಮಾತ್ರ ಸಿಗುತ್ತಿಲ್ಲ.

- Advertisement -

ಕಳೆದ ಅ.3ರಂದು ಮಕ್ಕಳು ನಾಪತ್ತೆಯಾಗಿದ್ದಾರೆ. ಮುಹಮ್ಮದ್ ನಿಝಾಮ್ ಮತ್ತು ಬೇಗಮ್ ದಂಪತಿಯ ಇಬ್ಬರು ಮಕ್ಕಳು. ನಿಝಾಮ್ ಅವರ ತಂಗಿ ನಗೀನಾ ಜೊತೆಗೆ ದಂಪತಿಯ ಮಕ್ಕಳಾದ ರುಕ್ಸಾನಾ ಹಾಗೂ ಹಸನ್ ಹೋಗಿದ್ದಾರೆ. ಮೂಲತಃ ಬಿಹಾರ ಮೂಲದ ದಂಪತಿಯಾಗಿದ್ದು, ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು.

ನಗರದ ಮಿನರ್ವ ಸರ್ಕಲ್ ಬಳಿಯಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ದಂಪತಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರತಿ ಬಾರಿಯೂ ಕೆಲಸದ ಸ್ಥಳದಲ್ಲಿಯೇ ಮಕ್ಕಳು ಆಟವಾಡಿಕೊಂಡು ಇರುತ್ತಿದ್ದರು. ಆದರೆ ಅ.3ರಂದು  ನಾಪತ್ತೆಯಾಗಿದ್ದಾರೆ. ಮಕ್ಕಳು ಹೊರಗೆ ಹೋಗುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪೋಷಕರು ಮತ್ತು ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ಮಾಡುತ್ತಿದ್ದಾರೆ.

ಸಿಸಿಟಿವಿಯಲ್ಲಿ ಮಕ್ಕಳು ಒಂದಷ್ಟು ಬೀದಿಗಳಲ್ಲಿ ಅಲೆದಾಡುವುದು ಪತ್ತೆಯಾಗಿದೆ. ಆದರೆ ಇದುವರೆಗೂ ಯಾರ ಕೈಗೂ ಸಿಕ್ಕಿಲ್ಲ. ಇದರಲ್ಲಿ 15 ವರ್ಷದ ನಗೀನಾಗೆ ಸ್ವಲ್ಪ ಬುದ್ದಿ ಮಾಂದ್ಯವಿದೆ. ಸದ್ಯ ಎಂಟು ತಂಡ ರಚಿಸಿ ಕಲಾಸಿಪಾಳ್ಯದ ಪೋಲಿಸ್ ಇನ್ಸ್ ಪೆಕ್ಟರ್ ಮಂಜೇಗೌಡರ ನೇತೃತ್ವದಲ್ಲಿ ಮಕ್ಕಳ ಹುಡುಕಾಟ ನಡೆಸಿದ್ದಾರೆ. ಕಲಾಸಿಪಾಳ್ಯದ ಠಾಣೆಯ ಪೊಲೀಸರಿಂದ ಮಕ್ಕಳಿಗಾಗಿ ವಾಟ್ಸಪ್ ಗ್ರೂಪ್ ಕೂಡ ಮಾಡಲಾಗಿದೆ.

Join Whatsapp