ಗಾಝಾದಿಂದ ಸಾವಿರಾರು ಸೈನಿಕರು ಇಸ್ರೇಲ್‌ಗೆ ವಾಪಸ್

Prasthutha|

ಟೆಲ್ ಅವೀವ್: ಗಾಝಾ ಪ್ರದೇಶದ ಪ್ರಮುಖ ದಕ್ಷಿಣದ ನಗರದಲ್ಲಿ ಯುದ್ಧ ಕೇಂದ್ರೀಕೃತಗೊಳಿಸಿರುವುದರಿಂದ ಗಾಝಾದಿಂದ ಸಾವಿರಾರು ಸೈನಿಕರನ್ನು ಇಸ್ರೇಲ್‌ಗೆ ವಾಪಸ್ ಕರೆಸಿಕೊಂಡಿದ್ದೇವೆ ಎಂದು ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ. ಅಮೆರಿಕದ ವಿದೇಶಾಂಗ ಸಚಿವ ಅಂಥೋನಿ ಬ್ಲಿಂಕೆನ್ ಗಾಝಾ ಪ್ರದೇಶಕ್ಕೆ ಭೇಟಿ ನೀಡಲಿರುವ ಸಂದರ್ಭದಲ್ಲೇ ಇಸ್ರೇಲ್ ಗಾಝಾದಿಂದ ಸೇನೆ ಹಿಂಪಡೆಯುವುದಾಗಿ ಘೋಷಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

ಉತ್ತರಾರ್ಧದಲ್ಲಿ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದೆ ಎಂದ ಇಸ್ರೇಲ್ ಸೇನೆ, ಆ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಸಮಯ ಹತ್ತಿರದಲ್ಲಿರುವುದರಿಂದ ಕೆಲವು ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎಂದು ಹೇಳಿದೆಯೆಂದು ವರದಿಯಾಗಿದೆ.

ಆದರೆ ಗಾಝಾದ ಇತರ ಪ್ರದೇಶಗಳಲ್ಲಿ, ವಿಶೇಷವಾಗಿ ದಕ್ಷಿಣದ ಖಾನ್ಯೂನಿಸ್ ಮತ್ತು ಕೇಂದ್ರ ಪ್ರದೇಶಗಳಲ್ಲಿ ತೀವ್ರ ಯುದ್ಧ ಮುಂದುವರಿದಿದೆ ಎಂದೂ ವರದಿಯಾಗಿದ್ದು, ಗಾಝಾವನ್ನು 16 ವರ್ಷದಿಂದ ಆಳುತ್ತಿರುವ ಹಮಾಸ್ ಅನ್ನು ನಿರ್ಮೂಲನೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಇಸ್ರೇಲ್ ಘೋಷಿಸಿದೆ.

Join Whatsapp