ಚೀನಾದಲ್ಲಿ ಸಾವಿರಾರು ಮಸೀದಿಗಳ ನೆಲಸಮ| ಉಯಿಘರ್ ಮುಸ್ಲಿಮರ ಮೇಲೆ ಮುಂದುವರೆದ ಧಾರ್ಮಿಕ ನಿಬಂಧನೆ!

Prasthutha: September 25, 2020


ಚೀನಾದ ಅಧಿಕಾರಿಗಳು ಕ್ಸಿನ್ಜಿಯಾಂಗ್‌ನಲ್ಲಿ 16,000 ಸಾವಿರ ಮಸೀದಿಗಳನ್ನು ನೆಲಸಮ ಮಾಡಿದ್ದಾರೆ ಎಂಬುದಾಗಿ ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಶುಕ್ರವಾರ ವರದಿ ಮಾಡಿದೆ. ಇತ್ತೀಚಿಗೆ ಈ ಪ್ರದೇಶದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿಯು ಬೆಟ್ಟು ಮಾಡಿದೆ.

ಹತ್ತು ಲಕ್ಷಕ್ಕೂ ಅಧಿಕ ಉಯಿಘರರು ಮತ್ತು ಇತರ ಮುಸ್ಲಿಂ ಟರ್ಕಿಶ್ ಮಾತನಾಡುವ ಜನರನ್ನು ವಾಯುವ್ಯ ಪ್ರದೇಶದ ಶಿಬಿರಗಳಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಸಾಂಪ್ರದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ತ್ಯಜಿಸುವಂತೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಎಂಬುದಾಗಿ ಹಕ್ಕುಗಳ ಗುಂಪುಗಳು ಹೇಳಿವೆ.

ಸುಮಾರು 16,000 ಮಸೀದಿಗಳು ನೆಲಸಮವಾಗಿವೆ ಹಾಗೂ ಹಲವು ಪವಿತ್ರ ತಾಣಗಳಿಗೆ ಹಾನಿ ಮಾಡಲಾಗಿದೆ ಎಂಬುದಾಗಿ ಉಪಗ್ರಹ ಚಿತ್ರಣವನ್ನು ಆಧರಿಸಿ ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಎಎಸ್ಪಿಐ) ವರದಿ ಮಾಡಿದೆ.

ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ವಿನಾಶಗಳು ನಡೆದಿವೆ ಮತ್ತು ಅಂದಾಜು 8,500 ಮಸೀದಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದೂ ಉರುಮ್ಕಿ ಮತ್ತು ಕಾಶ್ಗರ್ ಕೇಂದ್ರಗಳ ಹೊರಗೆ ಹೆಚ್ಚಿನ ಹಾನಿಯಾಗಿದೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!