ವುಹಾನ್ । ಕೊರೋನಾ ವೈರಸ್ ಸ್ಪೋಟದ ವರದಿ । ನಾಪತ್ತೆಯಾಗಿದ್ದ ಚೀನೀ ಪತ್ರಕರ್ತ ಕೊನೆಗೂ ಪತ್ತೆ!

Prasthutha|

ಚೀನಾದ ವುಹಾನ್ ನಲ್ಲಿ ಕೊರೋನ ವೈರಸ್ ಸ್ಫೋಟವಾದ ಕುರಿತು ವರದಿ ಮಾಡಿದ ನಂತರ ಫೆಬ್ರವರಿಯಿಂದ ನಾಪತ್ತೆಯಾಗಿದ್ದ ಚೀನಾದ ಪತ್ರಕರ್ತ ಕೊನೆಗೂ ಪತ್ತೆಯಾಗಿದ್ದಾರೆ. ಈ ಕುರಿತು ಅವರ ಸ್ನೇಹಿತ ಖಚಿತಪಡಿಸಿದ್ದಾರೆ.  ಮಾಜಿ ವಕೀಲ ಮತ್ತು ಸಿಟಿಝನ್ ಪತ್ರಕರ್ತನಾಗಿರುವ ಚೆನ್ ಕ್ಯುಶಿ ಅವರನ್ನು ಚೀನಾ ಅಧಿಕಾರಿಗಳು ಬಂಧಿಸಿದ್ದು, ಅವರು ಸದ್ಯ “ಉತ್ತಮ ಆರೋಗ್ಯ” ಹೊಂದಿರುವುದಾಗಿ  ಅವರ ಮಿತ್ರ ಕ್ಸಿ ಕ್ಸಿಯಾವೊಡಾಂಗ್ ತನ್ನ ಯೂಟ್ಯೂಬಿನ ಲೈವ್ ಸೆಷನ್ ನಲ್ಲಿ ಹೇಳಿದ್ದಾರೆ.

ಶಾಂಡೋಂಗ್ ನ ಕ್ವಿಂಡಾವೊದಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದರೂ, ಪತ್ರಕರ್ತನನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಕ್ಸಿ ಕ್ಸಿ ಹೇಳಿದ್ದಾರೆ. ವುಹಾನ್ ನಲ್ಲಿ ಕೊರೊನಾ ವೈರಸ್ ಸ್ಫೋಟ ಸಂಭವಿಸಿದ ಜನವರಿ 23ರಿಂದ ಚೆನ್ ವರದಿ ಮಾಡಲಾರಂಭಿಸಿದರು. ಅಲ್ಲಿ ಅವರು ಬೀದಿಗಳಲ್ಲಿ ಮತ್ತು ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಆದರೆ ಆನಂತರ ಅವರು ಕಣ್ಮರೆಯಾಗಿದ್ದರು. ಪತ್ರಕರ್ತನ ಬಗ್ಗೆ ಚೀನಾದ ಅಧಿಕಾರಿಗಳು ಯಾವುದೇ ಮಾಹಿತಿ ಯನ್ನೂ ನೀಡಿರಲಿಲ್ಲ.  ಆದರೆ ಆತನ ತಾಯಿ ಬಲವಂತವಾಗಿ ಆತನನ್ನು ಸರ್ಕಾರೀ ಅಧಿಕಾರಿಗಳೇ  ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದ್ದರು.

- Advertisement -

ಸ್ವತಃ ಸಮರ ಕಲೆಗಳ ತಾರೆಯಾಗಿರುವ ಕ್ಸು, “ಚೀನಾ, ಹಾಂಕಾಂಗ್ ಮತ್ತು ಜಪಾನ್ ನಲ್ಲಿ ತನಿಖೆ ನಡೆಸಿದ ನಂತರ, ಬಂಧಿತ ಪತ್ರಕರ್ತ ಯಾವುದೇ ಸಾಗರೋತ್ತರದ ವಿರೋಧಿ ಗುಂಪುಗಳೊಂದಿಗೆ ಭಾಗಿಯಾಗಿಲ್ಲ ಎಂದು ಬಹಿರಂಗವಾದ ನಂತರ, ಯಾವುದೇ ಕಾರಣಕ್ಕೂಅವರ ವಿರುದ್ಧ ತನಿಖೆ ಮುಂದುವರಿಸುವುದಿಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕ್ಸು ಯೂಟ್ಯೂಬಿನಲ್ಲಿ ಹೇಳಿದ್ದಾರೆ.

ಜಾಗತಿಕ ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಕೇಂದ್ರವಾಗಿದ್ದ ವುಹಾನ್ ನಲ್ಲಿ ಈ ಘಟನೆ ನಡೆದ ಬಗ್ಗೆ ವರದಿ ಮಾಡಿದ ಕ್ಕಾಗಿ ಅನೇಕ ಸಿಟಿಝನ್ ಪತ್ರಕರ್ತರನ್ನು ಚೀನಾ ಅಧಿಕಾರಿಗಳು ಬಂಧಿಸಿದ್ದರು. ಚೆನ್ ಕಣ್ಮರೆಯಾದ ನಂತರ ವರದಿ ಮಾಡಲು ವುಹಾನ್ ಗೆ ತಲುಪಿದ ಲಿ ಜೆಹುವಾ ಎನ್ನುವ ಪತ್ರಕರ್ತೆಯನ್ನು ಚೀನಾ ಆಡಳಿತ ಬಂಧಿಸಿತ್ತು. ನಂತರ ಆಕೆಯನ್ನು ಎಪ್ರಿಲ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು

- Advertisement -