ಚೀನಾದ ಅಧಿಕಾರಿಗಳು ಕ್ಸಿನ್ಜಿಯಾಂಗ್‌ನಲ್ಲಿ 16,000 ಸಾವಿರ ಮಸೀದಿಗಳನ್ನು ನೆಲಸಮ ಮಾಡಿದ್ದಾರೆ ಎಂಬುದಾಗಿ ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಶುಕ್ರವಾರ ವರದಿ ಮಾಡಿದೆ. ಇತ್ತೀಚಿಗೆ ಈ ಪ್ರದೇಶದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ವರದಿಯು ಬೆಟ್ಟು ಮಾಡಿದೆ.
ಹತ್ತು ಲಕ್ಷಕ್ಕೂ ಅಧಿಕ ಉಯಿಘರರು ಮತ್ತು ಇತರ ಮುಸ್ಲಿಂ ಟರ್ಕಿಶ್ ಮಾತನಾಡುವ ಜನರನ್ನು ವಾಯುವ್ಯ ಪ್ರದೇಶದ ಶಿಬಿರಗಳಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಸಾಂಪ್ರದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ತ್ಯಜಿಸುವಂತೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ ಎಂಬುದಾಗಿ ಹಕ್ಕುಗಳ ಗುಂಪುಗಳು ಹೇಳಿವೆ.
ಸುಮಾರು 16,000 ಮಸೀದಿಗಳು ನೆಲಸಮವಾಗಿವೆ ಹಾಗೂ ಹಲವು ಪವಿತ್ರ ತಾಣಗಳಿಗೆ ಹಾನಿ ಮಾಡಲಾಗಿದೆ ಎಂಬುದಾಗಿ ಉಪಗ್ರಹ ಚಿತ್ರಣವನ್ನು ಆಧರಿಸಿ ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ (ಎಎಸ್ಪಿಐ) ವರದಿ ಮಾಡಿದೆ.
ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ವಿನಾಶಗಳು ನಡೆದಿವೆ ಮತ್ತು ಅಂದಾಜು 8,500 ಮಸೀದಿಗಳು ಸಂಪೂರ್ಣವಾಗಿ ನಾಶವಾಗಿವೆ ಎಂದೂ ಉರುಮ್ಕಿ ಮತ್ತು ಕಾಶ್ಗರ್ ಕೇಂದ್ರಗಳ ಹೊರಗೆ ಹೆಚ್ಚಿನ ಹಾನಿಯಾಗಿದೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಚೀನಾದಲ್ಲಿ ಸಾವಿರಾರು ಮಸೀದಿಗಳ ನೆಲಸಮ| ಉಯಿಘರ್ ಮುಸ್ಲಿಮರ ಮೇಲೆ ಮುಂದುವರೆದ ಧಾರ್ಮಿಕ ನಿಬಂಧನೆ!
Prasthutha|