ಮತದಾನದ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಬೀದಿಗಿಳಿದ ಅಮೆರಿಕನ್ ಜನತೆ

Prasthutha|

ವಾಷಿಂಗ್ಟನ್: ಸಂಯುಕ್ತ ಅಮೆರಿಕದ ರಾಜಧಾನಿ ಮತ್ತು ರಾಷ್ಟ್ರದ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಮತದಾನದ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಿರುವ ದೃಶ್ಯಗಳು ಜಗತ್ತಿನಾದ್ಯಂತ ಸಂಚಲನ ಮೂಡಿಸಿವೆ.

- Advertisement -

ಅಮೆರಿಕದಲ್ಲಿ ಮತದಾನದ ಮೇಲೆ ನಿರ್ಬಂಧವನ್ನು ವಿಧಿಸುವ ರಾಷ್ಟ್ರ ಮಟ್ಟದ ಕಾಯ್ದೆಯ ವಿರುದ್ಧ ಅಮೆರಿಕನ್ ಜನತೆ ವ್ಯಾಪಕ ಆಕ್ರೋಶವನ್ನು ಪ್ರಕಟಿಸಿದ್ದಾರೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜನ್ಮ ದಿನದ ವಾರ್ಷಿಕೋತ್ಸವ ಅಂಗವಾಗಿ ಮತದಾನದ ಹಕ್ಕನ್ನು ಸಂರಕ್ಷಿಸುವ ನಡೆ ಎಂಬ ಶೀರ್ಷಿಕೆ ಅಡಿಯಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ವಾಷಿಂಗ್ಟನ್ ನಲ್ಲಿ ಆಯೋಜಿಸಲಾಗಿತ್ತು. ಜನಾಂಗೀಯ ಆಧಾರದಲ್ಲಿ ಮತದಾನದ ಹಕ್ಕು ಚಲಾವಣೆ ಮಾಡಲು ರೂಪಿಸಿದ ನೂತನ ಕಾಯ್ದೆಯನ್ನು ವಿರೋಧಿಸಿ ಈ ಬೃಹತ್ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

- Advertisement -

ವಾಷಿಂಗ್ಟನ್ ನ ಮೆಕ್ ಫೆರ್ಸನ್ ಸರ್ಕಲ್ ನಿಂದ ನ್ಯಾಷನಲ್ ಮಾಲ್ ತನಕ ಧ್ವಜ, ಭಿತ್ತಿಪತ್ರ ಮತ್ತು ಬ್ಯಾನರ್ ಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಮಾತ್ರವಲ್ಲದೆ ಅಪಾರ ಸಂಖ್ಯೆಯ ಪ್ರತಿಭಟನಾಕಾರರು ಜಮಾವಣೆಗೊಂಡು ಸರ್ಕಾರ ಜಾರಿಗೆ ಮುಂದಾಗಿರುವ ನೂತನ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಅದೇ ರೀತಿ ರಾಷ್ಟ್ರದ ಇತರ ನಗರಗಳಾದ ಫೀನಿಕ್ಸ್, ಮಿಯಾಮಿ ಸೇರಿದಂತೆ ಬಹುತೇಕ ಎಲ್ಲಾ ನಗರಗಳಲ್ಲಿ ಆಕ್ರೋಶಿತ ಜನತೆ ಈ ಕಾಯ್ದೆಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿದೆ.

ಈ ಬೃಹತ್ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಪುತ್ರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.



Join Whatsapp