ಅಕ್ರಮವಾಗಿ ತನ್ನ ಭೂಪ್ರದೇಶಕ್ಕೆ ನುಸುಳಿರುವ ಚೈನಾದ ವಿರುದ್ಧ ಭಾರತ ಯುದ್ಧಕ್ಕೆ ಮುಂದಾಗಲಿ : ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ

Prasthutha|

ನವದೆಹಲಿ: ಭಾರತದ ನೆಲವನ್ನು ಅಕ್ರಮವಾಗಿ ಕಬಳಿಸಿರುವ ನೆರೆರಾಷ್ಟ್ರ ಚೈನಾದ ವಿರುದ್ಧ ಭಾರತ ಯುದ್ಧಕ್ಕೆ ಮುಂದಾಗಲಿ ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.

- Advertisement -

ಪ್ರಸಕ್ತ ತಲೆದೋರಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು 1993 ರಲ್ಲಿ ಪರಸ್ಪರ ಸಹಮತದೊಂದಿಗೆ ಅಂಗೀಕರಿಸಿದ ಗಡಿರೇಖೆಯನ್ನು ಒಪ್ಪಿಕೊಂಡು ಮುಂದೆ ಸಾಗುವಂತಾಗಲಿ ಎಂದು ತಿಳಿಸಿದರು.

ಭಾರತ ಬೀಜಿಂಗ್ ನೊಂದಿಗಿನ ಗಡಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತ್ರ ಗಮನ ಹರಿಸಲಿ. ಹಾಂಗ್ ಕಾಂಗ್, ತೈವಾನ್ ಮತ್ತು ಟಿಬೆಟ್ ಬಗ್ಗೆ ಮಾತನಾಡುವ ಮೂಲಕ ನೆರೆಯ ದೇಶವನ್ನು ಕೆರಳಿಸದಿರಿ ಎಂದು ಅವರು ಭಾರತಕ್ಕೆ ಸಲಹೆ ನೀಡಿದರು.
ಚೈನಾ ಭಾರತಕ್ಕೆ ಅಪಾಯಕಾರಿ ಬೆದರಿಕೆಯಾಗಿದೆ.

- Advertisement -

ಆದ್ದರಿಂದ ಭಾರತವು ತನ್ನ ಮೇಲಿನ ಬೆದರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸ ಬೇಕಾಗಿದೆ. ಪ್ರಧಾನಿ ಚೈನಾದೊಂದಿಗೆ ಸಭೆಗಳನ್ನು ನಡೆಸುತ್ತಿರುವಾಗ ಚೈನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇದು ಭಾರತದ ರಾಜತಾಂತ್ರಿಕ ವೈಫಲ್ಯವನ್ನು ಎತ್ತಿಹಿಡಿಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಗೌರಿ ದ್ವಿವೇದಿ ಬರೆದಿರುವ ಬ್ಲಿಂಕರ್ಸ್ ಆದ್ ಹೌ ವಿಲ್ ದಿ ವರ್ಲ್ಡ್ ಕೌಂಟರ್ ಚೀನಾ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ನೈನ್ ಅವರು ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಚೈನಾವು ಭಾರತಕ್ಕೆ ಬೆದರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

Join Whatsapp