1300 ಕಿ.ಮೀ ಪಾದಯಾತ್ರೆ ಮೂಲಕ ಗಾಂಧಿ ವೇಷ ಧರಿಸಿ, ಗಾಂಧಿ ತತ್ವ ಪ್ರಚಾರ

Prasthutha|

ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಪ್ರೇಮಿಯೊಬ್ಬರು 23 ದಿನಗಳ ವರೆಗೆ ಸುಮಾರು 1300 ಕಿಲೋ ಮೀಟರ್‌ ನಷ್ಟು ಪ್ರಯಾಣ ಬೆಳೆಸಿ ಗಾಂಧಿ ತತ್ವವನ್ನು ವ್ಯಾಪಕ ಪ್ರಚಾರ ಮಾಡಿದ್ದಾರೆ.

- Advertisement -

ಗದಗ ಜಿಲ್ಲೆಯ ರೋಣ ತಾಲೂಕಿನ ಮುತ್ತಣ್ಣ ಚನ್ನಬಸಪ್ಪ ತಿರ್ಲಾಪೂರ (54) ಎಂಬುವರು ವರು ಈ ಮಹಾಕಾರ್ಯವನ್ನು ಮಾಡಿದವರು.

ಚನ್ನ ಬಸಪ್ಪ ಅವರು ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ ಓದಿ ಮತ್ತು ಗಾಂಧೀಜಿಯ ತತ್ವಾದರ್ಶಗಳ ಪ್ರೇರಣೆಯಿಂದ ಗಾಂಧೀಜಿಯ ವೇಷ ಧರಿಸಿ ಈ ಯಾತ್ರೆ ಕೈಗೊಂಡಿದ್ದಾರೆ.
ಸೆ.9ರಂದು ಕರ್ಕಿಕಟ್ಟಿಯಿಂದ ಆರಂಭಿಸಿದ ಪಾದಯಾತ್ರೆ ಅ.2ರಂದು ಕನ್ಯಾಕುಮಾರಿ ತಲುಪಿ ಮತ್ತೆ ಮರಳಿದ್ದಾರೆ.

- Advertisement -

ಗಾಂಧಿ, ವಿವೇಕಾನಂದರು ಮಾತ್ರವಲ್ಲದೆ ಅನೇಕ ಮಹಾತ್ಮರ, ಶರಣರು, ಸಂತರ ಸಂದೇಶಗಳನ್ನು ಜನರಿಗೆ ತಲುಪಿಸಿ ಬಂದಿದ್ದಾರೆ.



Join Whatsapp