ಬೇಕರಿ ನೌಕರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರನ್ನು ಗಲ್ಲಿಗೇರಿಸಿ: ಜಾಬಿರ್ ಅತ್ತಾಸ್

Prasthutha|

ಬೆಂಗಳೂರು: ಮನುಷ್ಯತ್ವ ಮರೆತು ದುಡಿದು ತಿನ್ನಲು ಬೆಳಗ್ಗೆಯಿಂದ ರಾತ್ರಿವರೆಗೆ ಕಷ್ಟಪಟ್ಟು ಬೇಕರಿಯನ್ನು ನಡೆಸುತ್ತಿದ್ದ ಅಮಾಯಕರ ಮೇಲೆ ಮನಬಂದಂತೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನು ಗಲ್ಲಿಗೇರಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಜಾಬಿರ್‌ ಅತ್ತಾಸ್ ಸರ್ಕಾರಕ್ಕೆ ಅಗ್ರಹಿಸಿದ್ದಾರೆ.

- Advertisement -

ಕೆಲವು ದಿನಗಳ ಹಿಂದೆ ರಾತ್ರಿ ವೇಳೆ ಏಕಾಏಕಿ ಬೇಕರಿಗೆ ನುಗ್ಗಿದ ಪುಡಿ ರೌಡಿಗಳು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಪ್ಲಾಸ್ಟಿಕ್‌ ಕ್ರೆಟ್ ಮತ್ತು ರಾಡ್’ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಈ ಸುದ್ದಿ ತಿಳಿದ ತಕ್ಷಣ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರ್ ನೇತೃತ್ವದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಹಲವಾರು ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಯ ಮುಖ್ಯಸ್ಥರು ಎಚ್‌’ಎಎಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪುಡಾರಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ಜಾಬಿರ್,‌ ಇಂತಹ ದುಷ್ಕೃತ್ಯ ಮಾಡುವವರು ಯಾರೇ ಆಗಿದ್ದರೂ ಅಂತವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

- Advertisement -

ಹೋರಾಟಗಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ತಕ್ಷಣಕ್ಕೆ ಬಂಧಿಸುವುದಾಗಿ ಭರವಸೆ ನೀಡಿ ಭರವಸೆ ನೀಡಿದ ಎರಡು ಗಂಟೆ ಒಳಗಾಗಿ ಮೂವರು ಆರೋಪಿಗಳನ್ನು ಬಂಧಿಸಿರುವುದು, ಇನ್ನುಳಿದವರ ಬಗ್ಗೆ ಪತ್ತೆ ಕಾರ್ಯಕ್ಕೆ ಹೊರಟಿರುವುದು ಶ್ಲಾಘನೀಯ ಎಂದು ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರ ಪ್ರವೀಣ್ ಕುಮಾರ್ ಶೆಟ್ಟಿ, ದೇವಲ್ಕುಂದ ಪ್ರತಾಪ್ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಕಾರ್ಮಿಕ ಪರಿಷತ್‌ ಮಹಿಳಾ ರಾಜ್ಯಾಧ್ಯಕ್ಷೆ ಪೂಜಾ ಶೆಟ್ಟಿ, ಮುಖಂಡರಾದ ಶೈನಿ, ಸ್ವಾಮಿ, ಲತಾ, ಉಮಾ, ಹಾಗೂ ಹಲವಾರು ಉದ್ಯಮಿಗಳು, ಕಾರ್ಮಿಕರು ಹೋರಾಟಗಾರರು ಪಾಲ್ಗೊಂಡಿದ್ದರು.

Join Whatsapp