ಉಚಿತ ವಿದ್ಯುತ್ ಯೋಜನೆಯನ್ನು ವಿರೋಧಿಸುವವರಿಗೆ ಆಯ್ಕೆಯ ಅವಕಾಶ: ಕೇಜ್ರಿವಾಲ್

Prasthutha|

ಹೊಸದಿಲ್ಲಿ: ಆಪ್ ಸರ್ಕಾರದ ಉಚಿತ ವಿದ್ಯುತ್ ಯೋಜನೆಯನ್ನು ವಿರೋಧಿಸುವವರಿಗೆ ಮತ್ತು ಸಬ್ಸಿಡಿ ಬಿಡುವ ಜನರಿಗೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಯ್ಕೆಯ ಅವಕಾಶವನ್ನು ಮುಂದಿಟ್ಟಿದ್ದಾರೆ.

- Advertisement -

ದೆಹಲಿ ಒಟ್ಟು58 ಲಕ್ಷ ಗೃಹ ವಿದ್ಯುತ್ ಗ್ರಾಹಕರಿದ್ದು, ಅದರಲ್ಲಿ ಒಟ್ಟು ಸಬ್ಸಿಡಿ ಪಡೆಯುವವರು 47 ಲಕ್ಷ ಗ್ರಾಹಕರು ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

30 ಲಕ್ಷ ಗ್ರಾಹಕರು 200 ಯುನಿಟ್ ವರೆಗಿನ ಶೂನ್ಯ ಬಿಲ್‌ಗಳನ್ನು ಪಡೆಯುತ್ತಿದ್ದು,  17 ಲಕ್ಷ ಗ್ರಾಹಕರು 50% ಸಬ್ಸಿಡಿ ಅಂದರೆ 201-400 ಯೂನಿಟ್ ವರೆಗೆ ವಿದ್ಯುತ್ ಬಳಕೆದಾರರಿದ್ದಾರೆ ಎಂದು ಮಾಹಿತಿ ನೀಡಿದರು.

- Advertisement -

ಈ ಸಬ್ಸಿಡಿ ಯೋಜನೆಯಿಂದ ಆರ್ಥಿಕತೆ  ಕುಸಿಯುತ್ತದೆ. ರಾಜ್ಯ ಸಾಲದ ಸುಳಿಗೆ ಸಿಲುಕುತ್ತದೆ ಎಂದು ವಿರೋಧಿಸುವ ಕೆಲವರು ಸಬ್ಸಿಡಿಯನ್ನು ಪಡೆಯಲು ಬಯಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದೀಗ ಜನರಿಗೆ ಸಬ್ಸಿಡಿಯನ್ನು ಆರಿಸಿಕೊಳ್ಳಲು ಆಯ್ಕೆಯನ್ನು ನೀಡಲು ಬಯಸುತ್ತಿದ್ದು, ಸಬ್ಸಿಡಿಯನ್ನು ಆಯ್ಕೆ ಮಾಡಲು ಬಯಸುವವರು ಶೀಘ್ರವಾಗಿ  ಆಯ್ಕೆ ಮಾಡಬೇಕಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Join Whatsapp