ತೊಕ್ಕೋಟು: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!

Prasthutha|

ಉಳ್ಳಾಲ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ತೊಕ್ಕೋಟು ಸಮೀಪ ಚೆಂಬುಗುಡ್ಡೆ ನಿವಾಸಿ ಝಾಕಿರ್ ಎಂಬಾತನ ಮೃತದೇಹ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದೆ.

- Advertisement -

ಸಪ್ಟೆಂಬರ್ 24 ರಂದು ಮನೆಯಿಂದ ತೊಕ್ಕೊಟಿಗೆ ಹೊರಟವರು ಆ ನಂತರ ಕಾಣೆಯಾಗಿದ್ದರು ಮತ್ತು ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು.ಹತ್ತು ದಿನಗಳಾದರೂ ಸಂಪರ್ಕಕ್ಕೆ ಸಿಗದ ಝಾಕಿರ್, ಇದೀಗ ಶವವಾಗಿ ಪತ್ತೆಯಾಗಿದ್ದು ಇದೊಂದು ವ್ಯವಸ್ಥಿತ ಕೊಲೆ ಎಂದು ಝಾಕಿರ್ ಕುಟುಂಬಸ್ಠರು ಶಂಕೆ ವ್ಯಕ್ತಪಡಿಸಿದ್ದು, ಶೀಘ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮೃತ ದುರ್ದೈವಿ ಮೀನು ವ್ಯಾಪಾರಿಯಾಗಿದ್ದು, ಏಳು ವರ್ಷದ ಮಗು ಮತ್ತು ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp