ನ.8ರಂದು ಈ ವರ್ಷದ ಸಂಪೂರ್ಣ ಚಂದ್ರಗ್ರಹಣ

Prasthutha|

ನವದೆಹಲಿ: ನವೆಂಬರ್ 8ರಂದು ಪೂರ್ಣ ಚಂದ್ರ ಗ್ರಹಣವಿದ್ದು, ಉತ್ತರ ಅಮೆರಿಕದವರಿಗೆ ಚಂದ್ರ ಪೂರ್ಣ ಕೆಂಪಾಗುವುದನ್ನು ನೋಡುವ ಅವಕಾಶ ಸಿಗಲಿದೆ.

- Advertisement -

ಒಂದು ವರ್ಷದ ಬಳಿಕ ಮತ್ತೆ ಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ. ಇಡೀ ಉತ್ತರ ಅಮೆರಿಕ ಖಂಡ, ದಕ್ಷಿಣ ಅಮೆರಿಕ ಖಂಡದ ಬಹು ಭಾಗ, ಶಾಂತ ಸಾಗರ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಏಷ್ಯಾದಲ್ಲಿ ಚಂದ್ರ ಗ್ರಹಣ ಪೂರ್ಣವಾಗಿ ಗೋಚರಿಸಲಿದೆ. 

ಇದನ್ನು ತಪ್ಪಿಸಿಕೊಂಡರೆ ಮುಂದೆ ಮಾರ್ಚ್ 2025ರವರೆಗೆ ಪೂರ್ಣ ಚಂದ್ರಗ್ರಹಣ ನೋಡಲು ಸಾಧ್ಯವಿಲ್ಲ ಎಂದು ಸ್ಕಯ್ ಆಂಡ್ ಟೆಲೆಸ್ಕೋಪ್ ನಲ್ಲಿ ವೀಕ್ಷಣಾ ಸಂಪಾದಕಿ ಆಗಿರುವ ಡಯಾನಾ ಹ್ಯಾನಿಕೈನಿನ್ ಹೇಳಿದರು.



Join Whatsapp