ಮುಂಬೈ: ತ್ಯಾಜ್ಯದಿಂದ ಚಿಕ್ಕದಾದ ಜೀಪೊಂದನ್ನು ತಯಾರಿಸಿದ ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿಯೊಬ್ಬರಿಗೆ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಬೊಲೆರೊ ನೀಡುವ ಭರವಸೆ ನೀಡಿದ್ದಾರೆ.
ದತ್ತಾತ್ರೇಯ ಅವರು ತಮ್ಮ ಮಗನಿಗಾಗಿ ಈ ಸಣ್ಣ ಜೀಪ್ ನಿರ್ಮಿಸಿದ್ದಾರೆ. ಕಿಕ್ಕರ್‌ನಿಂದ ಸ್ಟಾರ್ಟ್ ಮಾಡುವ ಜೀಪ್‌ನ ವೀಡಿಯೊವನ್ನು ಯೂಟ್ಯೂಬ್ ಬಳಕೆದಾರರು ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಆನಂದ್ ಮಹೀಂದ್ರಾ ದೊಡ್ಡ ಆಫರ್ ನೀಡಿದ್ದಾರೆ.
ಸ್ಟೀರಿಂಗ್ ಅನ್ನು ಎಡಭಾಗದಲ್ಲಿ ಜೋಡಿಸಲಾಗಿರುವ ಈ ವಾಹನದಲ್ಲಿ ಒಟ್ಟು ನಾಲ್ಕು ಮಂದಿಗೆ ಪ್ರಯಾಣಿಸಬಹುದು. ಹಳೆಯ ಕಾರುಗಳು ಮತ್ತು ಇತರ ವಸ್ತುಗಳ ಅವಶೇಷಗಳನ್ನು ಈ ವಾಹನವನ್ನು ನಿರ್ಮಿಸಲು ಬಳಸಲಾಗಿದೆ. ನಿರ್ಮಾಣಕ್ಕಾಗಿ 60,000 ರೂ. ಖರ್ಚು ಮಾಡಲಾಗಿದೆ.