ಅಮೆರಿಕ ಆಸ್ಪತ್ರೆಗಳಲ್ಲಿ ಜನಾಂಗೀಯ ತಾರತಮ್ಯ | ಕೋವಿಡ್ ನಿಂದಾಗಿ ಸಾವಿಗೀಡಾದ ವೈದ್ಯೆ ಪೋಸ್ಟ್ ಮಾಡಿದ್ದ ವೀಡಿಯೊ ವೈರಲ್

Prasthutha|

ವಾಷಿಂಗ್ಟನ್ : ಭಾರತದಲ್ಲಿ ಜಾತಿ ಪದ್ಧತಿಯಿದ್ದಂತೆ ಅಮೆರಿಕದಲ್ಲಿ ಕರಿಯ-ಬಿಳಿಯ ಎಂಬ ವರ್ಗಬೇಧವಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರ ಎನಿಸಿದರೂ, ಈಗಲೂ ಅಲ್ಲಿ ಬಿಳಿಯರು ಕರಿಯರನ್ನು ಶೋಷಣೆಗೊಳಪಡಿಸುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಕೊರೊನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಕರಿಯ ಜನಾಂಗದ ವೈದ್ಯರೊಬ್ಬರನ್ನು ಬಿಳಿಯ ಜನಾಂಗದ ವೈದ್ಯರು ಯಾವ ರೀತಿ ತಾರತಮ್ಯ ಮಾಡಿದರು ಎಂಬುದರ ಕುರಿತ ವೀಡಿಯೊವೊಂದು ವೈರಲ್ ಆಗಿದೆ.

- Advertisement -

ಕರಿಯ ಜನಾಂಗದ ವೈದ್ಯೆ ಸುಸಾನ್ ಮೂರೆ ಉಸಿರಾಡುವುದಕ್ಕೆ ಕಷ್ಟಪಡುತ್ತಾ ಒಂದು ವೀಡಿಯೊವೊಂದನ್ನು ಮಾಡಿದ್ದು, ಆಸ್ಪತ್ರೆಯಲ್ಲಿ ತಾನು ಅನುಭವಿಸಿದ ತಾರತಮ್ಯ ನೀತಿಯನ್ನು ಬಯಲಿಗೆಳೆದಿದ್ದಾರೆ.

ತನಗೆ ಉಸಿರಾಟದ ಸಮಸ್ಯೆಯಿದೆ ಎಂದರೆ ಬಿಳಿಯ ವೈದ್ಯನು ನಂಬಲಿಲ್ಲ. ತಾನೊಬ್ಬ ಪರವಾನಗಿ ಹೊಂದಿರುವ ವೈದ್ಯೆ ಎಂದು ತಿಳಿದಿದ್ದರೂ, ತಾನು ಡ್ರಗ್ಸ್ ತೆಗೆದುಕೊಳ್ಳುತ್ತಿರುವುದಾಗಿ ಆ ವೈದ್ಯ ಭಾವಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

- Advertisement -

ಬಿಳಿಯ ವೈದ್ಯರ ವರ್ತನೆ ನೋಡಿ, ತಾನು ಕರಿಯಳಾಗಿ ಹುಟ್ಟಬಾರದಿತ್ತು ಎಂದು ತನಗನಿಸಿತು ಎಂದು ಮೂರೆ ಹೇಳಿದ್ದಾರೆ. ಮೂರೆ ಈ ವೀಡಿಯೊವನ್ನು ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಆದರೆ, ಇದೀಗ ಮೂರೆ ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಈ ವೀಡಿಯೊ ವ್ಯಾಪಕ ಶೇರ್ ಆಗಿದೆ. ವೈದ್ಯಕೀಯ ವ್ಯವಸ್ಥೆಯಲ್ಲಿನ ಪೂರ್ವಾಗ್ರಹ ಮನೋಸ್ಥಿತಿಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.      

Join Whatsapp