ನಟ ರಜನಿಕಾಂತ್ ಹೈದರಾಬಾದ್ ನಲ್ಲಿ ಆಸ್ಪತ್ರೆಗೆ ದಾಖಲು

Prasthutha|

ಹೈದರಾಬಾದ್ : ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜನಪ್ರಿಯ ನಟ ರಜನಿಕಾಂತ್ ಇಂದು ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿಕಾಂತ್ ನಟಿಸುತ್ತಿರುವ ‘ಅನ್ನತ್ತೆ’ ಚಿತ್ರತಂಡದಲ್ಲಿ ಹಲವರಿಗೆ ಕೋವಿಡ್ 19 ಪಾಸಿಟಿವ್ ಬಂದಿತ್ತು. ರಜನಿಕಾಂತ್ ಅವರಿಗೆ ನೆಗೆಟಿವ್ ಬಂದಿತ್ತು.

ಆದರೆ, ಇಂದು ರಕ್ತದೊತ್ತಡದ ಹಿನ್ನೆಲೆಯಲ್ಲಿ, ರಜನಿಕಾಂತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಪೋಲೊ ಆಸ್ಪತ್ರೆಗಳು ಹೇಳಿಕೆ ಬಿಡುಗಡೆ ಮಾಡಿದೆ. ಕೋವಿಡ್ 19 ಪರೀಕ್ಷೆಯಲ್ಲಿ ಅವರಿಗೆ ನೆಗೆಟಿವ್ ಬಂದಿತ್ತು. ಆದರೆ, ಹೆಚ್ಚಿನ ಪರೀಕ್ಷೆಗೊಳಪಡಿಸುವ ಅಗತ್ಯವಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದೆಲ್ಲಾ ವಿಷಯದಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ.  

- Advertisement -