“ಯುದ್ಧಪೀಡಿತ ಪ್ರದೇಶದಿಂದ ತೆರವುಗೊಳಿಸುವುದೇ ನೈಜ ರಕ್ಷಣಾ ಕಾರ್ಯ, ಶಾಂತಿಯಿರುವ ಗಡಿ ಪ್ರದೇಶದಿಂದಲ್ಲ” | ಕೇಂದ್ರದ ವಿರುದ್ಧ ಸಂತ್ರಸ್ತರ ಕಿಡಿ

Prasthutha|

ರೊಮಾನಿಯಾದಿಂದ ನಾವೇ ಟಿಕೆಟ್ ಖರೀದಿಸಿ ಬರಬಹುದಿತ್ತಲ್ವಾ?

- Advertisement -

ಭಾರತ ಸರ್ಕಾರದ ವೈಫಲ್ಯಗಳ ಕುರಿತು ವಿದ್ಯಾರ್ಥಿನಿಯ ಆಕ್ರೋಶ

ನವದೆಹಲಿ: ಉಕ್ರೇನ್ ಸಿಲುಕಿರುವ ಸಂತ್ರಸ್ತರ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಯ ಬೆನ್ನಲ್ಲೇ, ಪ್ರತಿಕ್ರಿಯಿಸಿದ ಸಂತ್ರಸ್ತರು ‘ಯುದ್ಧಪೀಡಿತ ಪ್ರದೇಶದಿಂದ ತೆರವುಗೊಳಿಸುವುದೇ ನೈಜ ರಕ್ಷಣಾ ಕಾರ್ಯ, ಶಾಂತಿಯಿರುವ ಗಡಿ ಪ್ರದೇಶದಿಂದಲ್ಲ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಂತ್ರಸ್ತರು ಕಿಡಿಕಾರಿದ್ದಾರೆ.

- Advertisement -

ಯುದ್ಧ ಪೀಡಿತ ಉಕ್ರೇನ್ ನಿಂದ ರೊಮಾನಿಯಾದ ಮೂಲಕ ಭಾರತಕ್ಕೆ ಆಗಮಿಸಿದ ಸಂತ್ರಸ್ತೆ ಮಾಧ್ಯಮದೊಂದಿಗೆ ಮಾತನಾಡುತ್ತಾ, ಸ್ಥಳಾಂತರವೆಂದರೆ ಇನ್ನೊಂದು ರಾಷ್ಟ್ರಕ್ಕೆ ಬರಲು ಹೇಳಿ ಅಲ್ಲಿಂದ ತಾಯ್ನಾಡಿಗೆ ಕರೆದು ತರುವುದಲ್ಲ. ಬದಲಾಗಿ ಯುದ್ಧಪೀಡಿತ ಉಕ್ರೇನ್’ಗೆ ಬಂದು ನಮ್ಮನ್ನು ರಕ್ಷಿಸಿ ಭಾರತಕ್ಕೆ ಸ್ಥಳಾಂತರಿಸುವಲ್ಲಿ ಮುತುವರ್ಜಿ ವಹಿಸುವುದು. ಇದರಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಆಕ್ರೋಶಿತರಾಗಿ ತಿಳಿಸಿದ್ದಾರೆ.

https://twitter.com/SwatiIKR/status/1499293446162771971

ಕೇಂದ್ರ ಸರ್ಕಾರ ನಮ್ಮನ್ನು ಯಾವುದೇ ವಿಧದಲ್ಲಾದರೂ ಇನ್ನೊಂದು ರಾಷ್ಟ್ರದ ಗಡಿಪ್ರದೇಶಕ್ಕೆ ಬರುವಂತೆ ಸೂಚಿಸಿದೆ. ಅಲ್ಲಿಗೆ ಬಂದ ನಮ್ಮನ್ನು ಭಾರತಕ್ಕೆ ವಿಮಾನಗಳ ಮೂಲಕ ಭಾರತಕ್ಕೆ ಕರೆದು ತಂದಿದೆ. ಇದನ್ನು ಸಂತ್ರಸ್ತರಾದ ನಾವೇ ಖುದ್ದಾಗಿ ಮಾಡಬಹುದಿತ್ತು. ಇದಕ್ಕೆ ಸರ್ಕಾರದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್’ನ ಒಡೆಶಾ ನಗರದಲ್ಲಿ ನಿರಂತರ ಶೆಲ್ ದಾಳಿ ಮತ್ತು ಬಾಂಬ್ ಸ್ಫೋಟವಾಗುತ್ತಿದ್ದಾಗ ಕೇಂದ್ರ ಸರ್ಕಾರ ಯುದ್ಧಪೀಡಿತ ಸ್ಥಳದಿಂದ ನಮ್ಮನ್ನು ರಕ್ಷಿಸಿ, ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿಲ್ಲ. ಗಡಿ ಪ್ರದೇಶಕ್ಕೆ ಬಂದು ಭಾರತಕ್ಕೆ ಮರಳುವುದಾದರೆ ನಮ್ಮ ಸ್ವಂತ ಖರ್ಚಿನಲ್ಲಿ ಭಾರತಕ್ಕೆ ಬರಬಹುದಾಗಿತ್ತು. ಇದಕ್ಕೆ ಸರ್ಕಾರ ಸೂಚನೆಯ ಅಗತ್ಯವಿಲ್ಲ ಎಂದು ಕಿಡಿಕಾರಿದರು.

ನಾವು ಖಾಸಗಿ ವಾಹನದ ಮೂಲಕ ಗಡಿ ಪ್ರದೇಶಕ್ಕೆ ಬಂದು ಭಾರತ ತಲುಪಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗಡಿ ಪ್ರದೇಶದಲ್ಲೂ ಸರ್ಕಾರ ನಮ್ಮ ನೆರವಿಗೆ ಬಂದಿಲ್ಲ ಎಂದು ಆಕ್ರೋಶಿತರಾದರು.

Join Whatsapp