ಬಲವಂತವಾಗಿ ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕಿದರು: ಮಂಗಳೂರು ಮುಸ್ಲಿಂ ವಿದ್ಯಾರ್ಥಿನಿಯರ ಆರೋಪ

Prasthutha|

ಮಂಗಳೂರು: ಪರೀಕ್ಷೆ ಬರೆಯಲು ಕುಳಿತಿದ್ದ ನಮ್ಮನ್ನು ಬಲವಂತವಾಗಿ ಪರೀಕ್ಷಾ ಕೊಠಡಿಯಿಂದ ಹೊರಗೆ ಹಾಕಲಾಗಿದೆ ಎಂದು ಮಂಗಳೂರಿನ ರಥಬೀದಿಯಲ್ಲಿರುವ ದಯಾನಂದ ಪೈ-ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

- Advertisement -

ಹಿಜಾಬ್ ಪ್ರಕರಣದ ಬಳಿಕ ಇಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿದ್ದರೂ ತರಗತಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಇಂದು ಆರಂಭವಾದ ಪರೀಕ್ಷೆ ಬರೆಯಲು ಕಾಲೇಜಿನ ಪ್ರಾಂಶುಪಾಲರು ಅವಕಾಶ ನೀಡಿದ್ದರು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಪ್ರಾಂಶುಪಾಲರ ಸಹಿಯುಳ್ಳ ಅನುಮತಿ ಪತ್ರವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದಾರೆ. ಮೊದಲು ಅನುಮತಿ ಕೊಟ್ಟಿದ್ದ ಪ್ರಾಂಶುಪಾಲರು, ಎಬಿವಿಪಿಯವರು ಕಾಲೇಜಿನಲ್ಲಿ ಗದ್ದಲ ಎಬ್ಬಿಸಿದ್ದರಿಂದ ಭಯಗೊಂಡು ಉಲ್ಟಾ ಹೊಡೆದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

- Advertisement -
ಚಿತ್ರ : ಪ್ರಾಂಶುಪಾಲರು ಸಹಿಯುಳ್ಳ ಅನುಮತಿ ಪತ್ರ

 ಹಿಜಾಬ್ ವಿದ್ಯಾರ್ಥಿನಿಯರಿಗೆ ಅನುಮತಿ ಕೊಟ್ಟಿಲ್ಲ ಎಂದು ಪೊಲೀಸರು ಹಾಗೂ ಎಬಿವಿಪಿಯವರ ಮುಂದೆ ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷಾ ಕೊಠಡಿಯಲ್ಲಿ ಎಬಿವಿಪಿ ನಾಯಕ ಸಾಯಿ ಸಂದೇಶ ಎಂಬಾತ ನಮಗೆ ಧಮ್ಕಿ ಹಾಕಿದ್ದಾನೆ ಎಂದು ಆರೋಪಿಸಿರುವ ವಿದ್ಯಾರ್ಥಿನಿಯರು, ಸ್ಥಳಕ್ಕೆ ಬಂದಿದ್ದ ಪೊಲೀಸರು ಸಹ ನಮಗೆ ಬೆದರಿಕೆ ಹಾಕಿದರು ಎಂದು ದೂರಿದ್ದಾರೆ. ಪರೀಕ್ಷೆ ನಮಗೆ ಮುಖ್ಯವಾಗಿದ್ದು ಹಿಜಾಬ್ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಚಿತ್ರ : ಗದ್ದಲ ಎಬ್ಬಿಸಿದ ಎಬಿವಿಪಿ ನಾಯಕ ಸಾಯಿ ಸಂದೇಶ್

Join Whatsapp