ನವದೆಹಲಿ: ಗುರ್ಗಾಂವ್ ನಲ್ಲಿ ನಮಾಝ್ ಗೆ ಅಡ್ಡಿಪಡಿಸುತ್ತಿರುವ ಸಂಘಪರಿವಾರದ ನಡೆಯ ವಿರುದ್ಧ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ರಾಜ್ಯ ಸಭಾ ಮಾಜಿ ಸಂಸದ ಮುಹಮ್ಮದ್ ಅದೀಬ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಕೇಸು ದಾಖಲಿಸುವ ಮೂಲಕ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.
ಮುಹಮ್ಮದ್ ಅದೀಬ್, ಜಮೀಯತ್ ಉಲೆಮಾ ಹಿಂದ್ ಅಧ್ಯಕ್ಷ ಮುಫ್ತಿ ಮುಹಮ್ಮದ್ ಸಲೀಮ್ ಖಾಸ್ಮಿ ಮತ್ತು ಅಬ್ದುಲ್ ಹಸೀಬ್ ಖಾಶ್ಮಿ ವಿರುದ್ಧ ಗುರ್ಗಾಂವ್ ಸೆಕ್ಟರ್ 40 ರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153, 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.