21 ರಾಜ್ಯಗಳ 187 ಜನರಿಗೆ ವಂಚನೆ: 7 ಮಂದಿ ಬಂಧನ

Prasthutha: January 7, 2022

ಫರೀದಾಬಾದ್ : ಸಾರ್ವಜನಿಕ ವಲಯದ ಬ್ಯಾಂಕುಗಳ ಅಧಿಕಾರಿಗಳ ಸೋಗಿನಲ್ಲಿ ಓಡಾಡುತ್ತ ದೇಶದ 21 ರಾಜ್ಯಗಳಲ್ಲಿ 187 ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ 7 ಜನರನ್ನು ಫರೀದಾಬಾದ್ ಪೋಲೀಸರು ಬಂಧಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಮುಂದುವರಿಸುವ ಬಗ್ಗೆ ವ್ಯವಹರಿಸಲು ಬಂದ ಅಧಿಕಾರಿಗಳಂತೆ ಮಾತನಾಡಿ, ಅದರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಆಮೇಲೆ ಅಂಥ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದರು. ಬಂಧಿತ 7 ಆರೋಪಿಗಳಿಂದ 35 ಮೊಬೈಲ್ ಫೋನ್ ಗಳು, 109 ಸಿಮ್ ಕಾರ್ಡ್ ಗಳು, 15 ಎಟಿಎಂ ಕಾರ್ಡ್ ಗಳು, 22.6 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಫರೀದಾಬಾದ್ ನ ಮನೋಜ್ ಕುಮಾರ್ ಎನ್ನುವವರು ತನ್ನ ಖಾತೆಗೆ ರೂ. 1.57 ಲಕ್ಷ ವಂಚಿಸಿರುವುದಾಗಿ ದೂರು ನೀಡಿದ್ದು ಈ ವಂಚಕರನ್ನು ಪತ್ತೆ ಹಚ್ಚಲು ದಾರಿ ಮಾಡಿತು.

ಮಧ್ಯ ಪ್ರದೇಶದ ಮೊರೇನಾದ ಸೋನ್ ವೀರ್, ರಾಹುಲ್, ಉತ್ತರ ಪ್ರದೇಶದ ಎಟ್ಟಾವಾದ ಅಮನ್, ಬಿಹಾರದ ಶಕ್ತಿ ಮಿಶ್ರಾ, ಉತ್ತರ ಪ್ರದೇಶದ ಫರೂಕಾಬಾದಿನ ಸುಬಾನ್, ದೆಹಲಿಯ ಅಬ್ದುಲ್ಲಾ ಮತ್ತು ಪಂಕಜ್ ಬಂಧಿತ ಆರೋಪಿಗಳಾಗಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!