ಅಗ್ನಿಪಥ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಪ್ರತಿಭಟನೆಯಲ್ಲಿ ಹಿಂಸೆ ಸಹಿಸುವುದಿಲ್ಲ: ಅಜಿತ್ ದೋವಲ್

Prasthutha|

ನವದೆಹಲಿ: ತಾತ್ಕಾಲಿಕ ಸೇನಾ ನೇಮಕಾತಿ ಯೋಜನೆ ಅಗ್ನಿಪಥ ನಿಲ್ಲುವುದಿಲ್ಲ. ಪ್ರತಿಭಟನೆಯಲ್ಲಿ ಹಿಂಸೆಯನ್ನು ಸಹಿಸುವುದಿಲ್ಲ ಎಂದು ಎನ್ ಎಸ್ ಎ- ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದರು. ಈ ಯೋಜನೆಯನ್ನು ದೂರದೃಷ್ಟಿಯಿಂದ ನೋಡಬೇಕು ಎಂದೂ ಅವರು ಮನವಿ ಮಾಡಿದರು.

- Advertisement -


ಮಾಧ್ಯಮಗಳ ಜೊತೆ ಮಾತನಾಡಿದ ದೋವಲ್ , “ಅಗ್ನಿಪಥ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅದು ಈಗಿಂದೀಗ ಹುಟ್ಟಿದ ಯೋಜನೆಯಲ್ಲ. ದಶಕಗಳಿಂದ ಚರ್ಚೆ ನಡೆದು ಜಾರಿಗೆ ತಂದ ಯೋಜನೆ. ಇದು ಬೇಕೆಂದವರು ಯಾರೂ ಅದರ ಕಾಠಿಣ್ಯದ ಜವಾಬ್ದಾರಿ ಹೊರಲು ಸಿದ್ಧರಿರಲಿಲ್ಲ. ಅಂಥದನ್ನು ಜಾರಿಗೆ ತರಲು ಪ್ರಧಾನಿ ಮೋದಿಯಂಥ ನಾಯಕ ಬೇಕಾಯಿತು” ಎಂದು ದೋವಲ್ ಹೇಳಿದರು.


ರಾಷ್ಟ್ರದ ಭದ್ರತೆಗಾಗಿ ಪ್ರಧಾನಿ ಮೋದಿಯವರ ಸರಕಾರದ ಆದ್ಯತೆಯ ಯೋಜನೆಯಿದು. ಇದು ಭವಿಷ್ಯದ ಯೋಜನೆಯಾಗಿದ್ದು ಸೇವೆ ಮತ್ತು ತಾಂತ್ರಿಕ ವಿಷಯಗಳನ್ನೆಲ್ಲ ಅಡಕಗೊಳ್ಳಲಿದೆ ಎಂದು ಅವರು ವಿವರಿಸಿದರು. “ದೂರದೃಷ್ಟಿಯುಳ್ಳವರು ಮಾತ್ರ ಇದರ ಭವಿಷ್ಯದ ನಡೆಯನ್ನು ಗುರುತಿಸಬಲ್ಲರು. ಅದು ಹಲವು ಗುರಿಗಳನ್ನು ಹೊಂದಿರುವ ಒಂದು ಯೋಜನೆಯಾಗಿದೆ. 2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಆದ್ಯತೆಯ ವಿಷಯ ದೇಶದ ಭದ್ರತೆ. ಅದಕ್ಕೆ ಹಲವು ದಾರಿಗಳು, ಹೆಜ್ಜೆಗಳ ಅಗತ್ಯವಿದೆ. ಅವುಗಳಲ್ಲಿ ಇದೊಂದು” ಎಂದು ದೋವಲ್ ಹೇಳಿದರು.

Join Whatsapp