ಭಾರತ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ: ನಿರ್ಮಲಾ ಸೀತಾರಾಮನ್

Prasthutha|

ನವದೆಹಲಿ: ಯಾವುದೇ ಕಾರಣಕ್ಕೂ ಭಾರತವು ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಲೆ ಏರಿಕೆಯ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಲೋಕಸಭೆಯಲ್ಲಿ ಹೇಳಿದ್ದಾರೆ

- Advertisement -

ಬೆಲೆ ಏರಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಉತ್ತರಿಸಿದರು. ಈ ವೇಳೆ ಅವರು ಬ್ಲೂಮ್ಬರ್ಗ್ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಆರ್ಥಿಕ ಹಿಂಜರಿತ ಸ್ಥಿತಿಗೆ ಎದುರಾಗುವ ಸಾಧ್ಯತೆ ಶೂನ್ಯ. ಅದಲ್ಲದೆ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಭಾರತೀಯ ಆರ್ಥಿಕತೆಯು ಹೆಚ್ಚು ಸದೃಢವಾಗುತ್ತಿದೆ ಎಂದು ಸೂಚಿಸುತ್ತಿದೆ ಎಂದು ಹೇಳಿದರು

ಹಲವು ತೊಡಕುಗಳ ನಡುವೆಯೂ ನಾವು ಮೇಲೆದ್ದು ಮುಂದೆ ಸಾಗುತ್ತಿದ್ದೇವೆ. ವೇಗವಾಗಿ ವೃದ್ಧಿಸುತ್ತಿರುವ ಆರ್ಥಿಕತೆಯಾಗಿ ಗುರುತಿಸಿಕೊಂಡಿದ್ದು, ಇದರ ಪೂರ್ಣ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಇಂಥ ಸಾಂಕ್ರಾಮಿಕ ಸ್ಥಿತಿಯನ್ನು ನಾವೆಂದೂ ಕಂಡಿರಲಿಲ್ಲ. ಎಲ್ಲ ಸಂಸದರು ಹಾಗೂ ರಾಜ್ಯ ಸರ್ಕಾರಗಳು ಅವರ ಪಾತ್ರಗಳನ್ನು ನಿರ್ವಹಿಸಿರುವುದನ್ನು ಗಮನಿಸಿದ್ದೇನೆ. ಇಲ್ಲವಾಗಿದ್ದರೆ, ಜಗತ್ತಿನ ಇತರೆ ಭಾಗಗಳಿಗೆ ಹೋಲಿಸಿದರೆ, ಭಾರತವು ಈಗ ಇರುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಸಾಂಕ್ರಾಮಿಕ ಹಾಗೂ ಜಾಗತಿಕ ಸಮಸ್ಯೆಗಳ ನಡುವೆಯೂ ನಾವು ಬಹಳಷ್ಟು ರಾಷ್ಟ್ರಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದೇವೆ. ನಿರೀಕ್ಷಿತ ಮಟ್ಟದಷ್ಟು ವೃದ್ಧಿ ಸಾಧ್ಯವಾಗದಿದ್ದರೂ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದ್ದೇವೆ ಎಂದು ತಿಳಿಸಿದ್ಧಾರೆ.

ಜುಲೈನಲ್ಲಿ GST ಸಂಗ್ರಹದಲ್ಲಿ ಶೇಕಡಾ 28 ರಷ್ಟು ಏರಿಕೆಯಾಗಿದ್ದು,  ರೂ. 1.49 ಲಕ್ಷ ಕೋಟಿಗೆ ತಲುಪಿದೆ. ಇದು ಎರಡನೇ ಅತಿ ಹೆಚ್ಚಿನ ತೆರಿಗೆ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 1, 16,393 ಕೋಟಿ ರೂಪಾಯಿಯಷ್ಟು ಜಿಎಸ್ ಟಿ ಸಂಗ್ರಹವಾಗಿತ್ತು.

Join Whatsapp