ಮನಿ ಲಾಂಡರಿಂಗ್ ಕೇಸ್: ಇಂದು ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ತೀರ್ಪು

Prasthutha|

►ಷರತ್ತುಬದ್ದ ಜಾಮೀನು ರದ್ದು ಮಾಡಿದರೆ ಬಂಡೆ ಬಂಧನ

- Advertisement -

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ಕೋರ್ಟ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ತೀರ್ಪು ಪ್ರಕಟ ಮಾಡಲಿದೆ.

ವಿಶೇಷ ಕೋರ್ಟ್ ಇಡಿ ಪ್ರಕರಣದಲ್ಲಿ ಬೇಲ್ ಅರ್ಜಿ ತೀರ್ಪು ಪ್ರಕಟಿಸುತ್ತದೆ. ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾ ಆರೋಪಿಗಳ ಹಾಜರಿಗೆ ಸೂಚನೆ ನೀಡಿದೆ. ಷರತ್ತುಬದ್ದ ಜಾಮೀನು ರದ್ದು ಮಾಡಿದರೆ ಡಿಕೆಶಿಗೆ ಬಂಧನ ಭೀತಿ ಎದುರಾಗಲಿದೆ. ED ಷರತ್ತುಬದ್ದ ಜಾಮೀನು ರದ್ದು ಕೋರಿ ಕೋರ್ಟ್ಗೆ ಮನವಿ ಮಾಡಿದೆ.

- Advertisement -


ED ವಾದ ಪುರಸ್ಕಾರ ಮಾಡಿದ್ರೆ ಡಿಕೆಶಿ ಸೇರಿ ನಾಲ್ವರಿಗೆ ಸಂಕಷ್ಟ ಎದುರಿಸಲಿದ್ಧಾರೆ. 2019 ಸೆಪ್ಟೆಂಬರ್ 3 ರಂದು ಅಕ್ರಮ ಹಣ ವರ್ಗವಣೆ ಕೇಸ್ ನಲ್ಲಿ ಡಿಕೆಶಿಯನ್ನು ಬಂಧಿಸಿದ್ದರು. ಕಂಡೀಷನ್ ಬೇಲ್ ಮೇಲೆ ಜೈಲಿನಿಂದ ರಿಲೀಸ್ ಆಗಿದ್ದರು. ED ಅಕ್ರಮ ಗಣ ವರ್ಗಾವಣೆ ಕೇಸ್ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.


ತಮ್ಮ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಡಿಕೆಶಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.


ಈಗಾಗಲೇ ವಾದ-ಪ್ರತಿವಾದಗನ್ನು ED ಕೋರ್ಟ್ ಆಲಿಸಿದ್ದು, ಬಂಡೆಯ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.

Join Whatsapp