ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ‘ವಿಶ್ವಗುರು’: ಹರಿಪ್ರಸಾದ್

Prasthutha|

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ವಿಶ್ವಗುರು. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

- Advertisement -

ದೇಶದ ನಾಲ್ಕು ಶಂಕರರಲ್ಲಿ ಇಬ್ಬರು ವಿರುದ್ಧ ಇದ್ದಾರೆ. ಮತ್ತಿಬ್ಬರು ತಟಸ್ಥರಿದ್ದಾರೆ ಎಂದಿದ್ದಾರೆ. ಆಮಂತ್ರಣ ಕೊಡೋಕೆ ಇವರು ಯಾರು. ರಾಮ ಪೋನ್ ಮಾಡಿ ಹೇಳಿದ್ನ ಕೊಡಿ ಅಂತ. ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು. ಇಂತಹದ್ದೇ ದೇವರು ಅಂತಿಲ್ಲ. ದೇಶದಲ್ಲಿ 33 ಕೋಟಿ ದೇವರಿವೆ. ಎಲ್ಲಾದ್ರು ಹೋಗ್ತೀವಿ ಎಂದಿದ್ದಾರೆ.

ನಾವು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದು ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಡಿದ್ದಾರೆ. ಆದರೆ, ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ಯಾವ ಆಮಂತ್ರಣ ಏನೂ ಬೇಡ ನಾವು ಹೋಗ್ತಿದ್ವಿ. ಆದ್ರೆ, ಅಲ್ಲಿ ಜಗದ್ಗುರು ಬದಲು ವಿಶ್ವಗುರು ಇದ್ದಾರೆ. ಅದರೆ ಬಿಜೆಪಿಯ ಕಾರ್ಯಕ್ರಮ ಎಂದು ಅವರು ಹೇಳಿದ್ದಾರೆ.

- Advertisement -



Join Whatsapp