ಕರ್ನಾಟಕ ಬಂದ್ ವಿಷಯದಲ್ಲಿ ಸಮುದಾಯದ ನಡುವೆ ಅಪಸ್ವರವಿಲ್ಲ: ಯು.ಟಿ.ಖಾದರ್

Prasthutha|

ಬೆಂಗಳೂರು: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ವಿರೋಧಿಸಿ ಕರ್ನಾಟಕದ ಅಮೀರೇ ಶರೀಅತ್ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದರ ಬಗ್ಗೆ ಸಮುದಾಯದ ನಡುವೆ ಅಪಸ್ವರವಿಲ್ಲ. ಈ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.

- Advertisement -

ಪ್ರಸ್ತುತ ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ನಿರಾಶಾದಾಯಕವಾಗಿದೆ. ಅಮೀರೇ ಶರೀಅತ್ ಅವರು ಬಂದ್ ಗೆ ಕರೆ ನೀಡಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಅವಕಾಶವಿದೆ ಎಂದರು.

ನಾಳೆಯ ಬಂದ್ ಗೆ ನಿಮ್ಮೆ ಬೆಂಬಲವಿದೆಯೇ ಎಂದು ಕೇಳಿದ ಪ್ರಶ್ನೆಗೆ, ರಾಜಕೀಯರಹಿತವಾಗಿ ನಡೆಯುತ್ತಿರುವ ಈ ಬಂದ್ ಗೆ ರಾಜಕೀಯ ಬೆರೆಸಲು ಇಷ್ಟಪಡುವುದಿಲ್ಲ ಎಂದಷ್ಟೇ ಉತ್ತರಿಸಿದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಪರವಾಗಿ ಕಾಂಗ್ರೆಸ್ ವಕೀಲರಾದ ದೇವದತ್, ಕಪಿಲ್ ಸಿಬಲ್ ಮುಂತಾದವರು ವಾದ ಮಂಡಿಸಲಿದ್ದಾರೆ ಎಂದು ಖಾದರ್ ಹೇಳಿದರು.

- Advertisement -

ಹಿಜಾಬ್ ಧರಿಸಬಾರದು ಎಂದು ಹೈಕೋರ್ಟ್ ಹೇಳಿಲ್ಲ. ತರಗತಿಯಲ್ಲಿ ಧರಿಸುವುದಕ್ಕೆ ಮಾತ್ರ ತಡೆ ಇದೆ. ಕಾಲೇಜು ಆಡಳಿತ ಮಂಡಳಿಗೆ ಸಮವಸ್ತ್ರ ನಿಗದಿಪಡಿಸುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

Join Whatsapp