ಮಾಧ್ಯಮಗಳು “ಸಿಡಿ ಲೇಡಿ” ತಲೆಬರಹದಲ್ಲಿ ವರದಿ ಪ್ರಕಟಿಸದಂತೆ ಸಂತ್ರಸ್ತೆ ಯುವತಿಯ ನ್ಯಾಯವಾದಿ ವಿನಂತಿ
Prasthutha: March 31, 2021

ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯನ್ನು ಸಿಡಿ ಲೇಡಿ ಎಂದು ಕರೆಯಬೇಡಿ ಎಂದು ಯುವತಿ ಪರ ನ್ಯಾಯವಾದಿ ಕೆಎನ್ ಜಗದೀಶ್ ಮಹಾದೇವ್ ವಿನಂತಿ ಮಾಡಿದ್ದಾರೆ.
ಮೆಡಿಕಲ್ ಚೆಕ್ ಅಪ್ ಬಳಿಕ ಪೊಲೀಸರು ಯುವತಿಯನ್ನು ಆಡುಗೋಡಿಯಲ್ಲಿ SIT ಟೆಕ್ನಿಕಲ್ ವಿಂಗ್ ಗೆ ಕರೆದುಕೊಂಡು ಬಂದು ಯುವತಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಮಹಾದೇವ್, ದಯವಿಟ್ಟು ಮಾಧ್ಯಮಗಳೊಂದಿಗೆ ವಿನಂತಿಸಿಕೊಳ್ಳುತ್ತೇನೆ. ಯುವತಿಯನ್ನು ಮಾಧ್ಯಮಗಳು “ಸಿಡಿ…” ಎಂದು ಬಳಕೆ ಮಾಡುತ್ತಿದೆ. ನನ್ನನ್ನು “ಸಿಡಿ…. ವಕೀಲರು” ಎಂಬ ತಲೆಬರಹ ನೀಡಿ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಇದು ಸರಿಯಲ್ಲ. ಈ ರೀತಿಯ ತಲೆಬರಹ ನೀಡಿ ಸುದ್ದಿ ಮಾಡದಿರುವಂತೆ ನಾನು ಮಾಧ್ಯಮಗಳೊಂದಿಗೆ ವಿನಂತಿಸಿಕೊಳ್ಳುತ್ತೇನೆ ಎಂದು ಜಗದೀಶ್ ವಿನಂತಿಸಿಕೊಂಡಿದ್ದಾರೆ.
ಜಗದೀಶ್ ಮಾತನಾಡುತ್ತಾ, ವಾಯ್ಸ್ ಬಗ್ಗೆ ಮತ್ತು ಪ್ರಕರಣಕ್ಕೆ ಕೆಲವೊಂದು ಪೂರಕವಾದ ಮಾಹಿತಿಯನ್ನು ಪಡೆಯಲು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.
