ರಸ್ತೆ ಆಗುವ ತನಕ ಮದುವೆಯಾಗಲ್ಲ ಎಂದು ಹೇಳಿದ್ದ ಯುವತಿಗೆ ರಸ್ತೆ ಮಾತ್ರವಲ್ಲ, ಮದುವೆ ಕೂಡಾ ಮಾಡುತ್ತೇನೆ ಎಂದ ಡಿಸಿ

Prasthutha|

ದಾವಣಗೆರೆ: ರಸ್ತೆ ಆಗುವ ತನಕ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಯುವತಿಯ ಮಾತಿಗೆ ಜಿಲ್ಲಾಧಿಕಾರಿ ಸ್ಪಂದಿಸಿದ್ದು, ನಾಳೆಯಿಂದಲೇ ರಸ್ತೆ ಕಾಮಗಾರಿಗೆ ಆದೇಶ ನೀಡಿದ್ದಾರೆ. ಜೊತೆಗೆ ಮದುವೆಯನ್ನೂ ಮಾಡಿ ಕೊಡುತ್ತೇನೆಂದು ಭರವಸೆ ನೀಡಿದ್ದಾರೆ.

ದಾವಣಗೆರೆ ತಾಲೂಕಿನ ರಾಂಪುರ ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ. ಹೀಗಾಗಿ ಈ ಗ್ರಾಮದ ಯುವತಿಯರಿಗೆ ಮದುವೆ ಭಾಗ್ಯ ಇಲ್ಲದಂತಾಗಿದೆ.

- Advertisement -


ಬಿಂದು ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ರಸ್ತೆ ಆಗುವವರೆಗೆ ಮದುವೆ ಆಗುವುದಿಲ್ಲ ಎಂದು ನಮ್ಮೂರಿಗೆ ರಸ್ತೆ ಆಗುವ ತನಕ ಮದುವೆ ಆಗುವುದಿಲ್ಲ ಎಂದು ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಸುದ್ದಿ ಮಾಡಿದ್ದಳು.
ಈ ವಿಷಯ ಅರಿತ ಜಿಲ್ಲಾಧಿಕಾರಿಗಳು ನೇರ ಗ್ರಾಮಕ್ಕೆ ಬಂದು ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭ ಹಾಗೂ ನಿನಗೊಂದು ಗಂಡು ಹುಡುಕಿ ಮದುವೆ ಕೂಡಾ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

- Advertisement -