ಉ.ಪ್ರ ಮುಖ್ಯಮಂತ್ರಿ ಯೋಗಿ ವಿರುದ್ಧ ವರದಿ ಪ್ರಕಟಿಸಿದ ಪ್ರಧಾನ ಸಂಪಾದಕರನ್ನು ವಜಾಗೊಳಿಸಿದ “ಔಟ್ ಲುಕ್ ನಿಯತಕಾಲಿಕ

Prasthutha|

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಔಟ್ ಲುಕ್ ನಿಯತಕಾಲಿಕದಲ್ಲಿ ಕವರ್ ಸ್ಟೋರಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ 33 ದಿನಗಳ ಕಡ್ಡಾಯ ರಜೆಯ ಬಳಿಕ ಕರ್ತವ್ಯಕ್ಕೆ ಹಾಜರಾದ ಪ್ರಧಾನ ಸಂಪಾದಕರನ್ನು ಕೇವಲ 2 ಗಂಟೆಗಳೊಳಗೆ ಕೆಲಸದಿಂದ ವಜಾಗೊಳಿಸಲಾಗಿದೆ.

ಔಟ್ ಲುಕ್ ನಿಯತಕಾಲಿಕದಲ್ಲಿ ಮುಂದಿನ ವಾರದ ಸಂಚಿಕೆಯ ಮುಖಪುಟದಲ್ಲಿ ಪ್ರಧಾನ ಸಂಪಾದಕರಾದ ರೂಬೆನ್ ಬ್ಯಾನರ್ಜಿ ಅವರು “ಅಬ್ಬಾ ಜಾನ್ ಮತ್ತು ಯೋಗಿ ಆದಿತ್ಯನಾಥ್” ಕವರ್ ಸ್ಟೋರಿ ಪ್ರಕಟಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.

- Advertisement -

ರೂಬೆನ್ ಬ್ಯಾನರ್ಜಿ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಔದ್ಯೋಗಿಕ ಒಪ್ಪಂದವನ್ನು ರದ್ದುಗೊಳಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಇಂದ್ರನಿಲ್ ರಾಯ್ ಅವರಿಗೆ ಆಡಳಿತ ವ್ಯವಸ್ಥಾಪಕರಾದ ಸುನಿಲ್ ಮೆನನ್ ಆದೇಶಿಸಿದ್ದಾರೆ. ಮಾತ್ರವಲ್ಲ ನೂತನ ಪ್ರಧಾನ ಸಂಪಾದಕರಾಗಿ ಚಿಂಕಿ ಸಿನ್ಹಾ ಅವರನ್ನು ನೇಮಿಸಿದೆ.

ಈ ಮಧ್ಯೆ ಔಟ್ ಲುಕ್ ನಿಯತಕಾಲಿಕ ಆಡಳಿತ ಮಂಡಳಿ ಮತ್ತು ತಮ್ಮ ನಡುವೆ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ವೈಚಾರಿಕ ಬಿನ್ನಾಭಿಪ್ರಾಯದಿಂದಾಗಿ ಬಿರುಕುಂಟಾಗಿರುವುದು ಸತ್ಯ ಎಂದು ಬ್ಯಾನರ್ಜಿ ಒಪ್ಪಿಕೊಂಡಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಸಿಇಒ ಇಂದ್ರನಿಲ್ ರಾಯ್ ದೀರ್ಘಾವಧಿಯಿಂದ ರಜೆಯಲ್ಲಿರುವ ಕಾರಣ ನಿಯತಕಾಲಿಕ ಬಿಡುಗಡೆಗೆ ತೊಂದರೆಯಾದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -