“ವೀಡಿಯೋದಲ್ಲಿರುವ ಯುವತಿ ನಮ್ಮ ಮಗಳೇ” | SIT ಮುಂದೆ ಕಣ್ಣೀರಿನೊಂದಿಗೆ ಹೇಳಿಕೆ ನೀಡಿದ ಪೋಷಕರು
Prasthutha: March 27, 2021

ಬೆಂಗಳೂರು: ಕ್ಷಣ ಕ್ಷಣಕ್ಕೊಂದು ಆಯಾಮಗಳನ್ನು ಪಡೆಯುತ್ತಿರುವ ರಾಜ್ಯದ ಸದ್ಯ ರಾಜಕೀಯ ಪರವಿರೋಧ ಚರ್ಚೆಗೆ ಗ್ರಾಸವಾಗಿರುವ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿಯ ಪೋಷಕರು SIT ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದು, ವೀಡಿಯೋದಲ್ಲಿರುವ ಯುವತಿ ನಮ್ಮ ಮಗಳು ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾದ ಮಾಜಿ ಸಚಿವ, ಶಾಸಕರಾದ ರಮೇಶ್ ಜಾರಕಿಹೊಳಿಯ ಸಿಡಿ ವಿಚಾರವು ಸದ್ಯಕ್ಕೆ ಮುಗಿಯುವ ಹಂತ ಕಾಣುತ್ತಿಲ್ಲ. ಪ್ರಕರಣವು ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆಯುತ್ತಿದೆ. ಕಳೆದ ಹಲವು ದಿನಗಳ ಬಳಿಕ ಸಂತ್ರಸ್ತೆ ಯುವತಿ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದ್ದು, ನನ್ನ ಪೋಷಕರಿಗೆ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿಗೊಂಡಿದ್ದರು.
ಈ ಸಂಬಂಧ ಇಂದು ಬೆಂಗಳೂರಿನ ಆಡುಗೋಡಿಯಲ್ಲಿರುವ SIT ಟೆಕ್ನಿಕಲ್ ವಿಂಗ್ ನಲ್ಲಿ ಯುವತಿಯ ಪೋಷಕರು SIT ಮುಂದೆ ಹೇಳಿಕೆ ನೀಡಿದ್ದಾರೆ. ಹೇಳಿಕೆಯಲ್ಲಿ ವೀಡಿಯೋದಲ್ಲಿರುವ ಯುವತಿ ನಮ್ಮ ಮಗಳು. ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿ ಕೂಡ ನಮ್ಮ ಮಗಳದ್ದು ಎಂದು ಪೋಷಕರು ಕಣ್ಣೀರಿನೊಂದಿಗೆ ಹೇಳಿಕೊಂಡಿದ್ದಾರೆ.
