ಮಸೀದಿಗೆ ನುಗ್ಗಿ ದಾಂಧಲೆವೆಬ್ಬಿಸಿದ ಮಹಿಳೆ ಹಿಂದೂವಲ್ಲ: ಆಡಳಿತ ಮಂಡಳಿ ಸ್ಪಷ್ಟನೆ

Prasthutha|

ವಾಷಿಂಗ್ಟನ್:‌ ಈದ್ ನಮಾಝ್ ನಿರ್ವಹಿಸುತ್ತಿದ್ದ ಮಸೀದಿಗೆ ನುಗ್ಗಿ ದಾಂಧಲೆವೆಬ್ಬಿಸಿದ ಮಹಿಳೆ ಹಿಂದೂವಲ್ಲ, ಆಕೆ ಮುಸ್ಲಿಮ್‌ ಸಮುದಾಯಕ್ಕೆ ಸೇರಿದ ಮಹಿಳೆ ಎಂದು ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

- Advertisement -

ಈ ಘಟನೆ ಅಮೆರಿಕಾದ ವರ್ಜೀನಿಯಾದ ಆಡಮ್ಸ್ ಸೆಂಟರ್’ನಲ್ಲಿ ನಡೆದಿತ್ತು.  ಈ ಸಂಬಂಧದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾತ್ರವಲ್ಲ ಆಕೆ ಭಾರತದ ಹಿಂದೂ ಮಹಿಳೆ ಎಂದು ಉಲ್ಲೇಖಿಸಲಾಗಿತ್ತು.

 ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯಾಗಿದ್ದು, ಮಹಿಳೆಯ ವಿಡಿಯೋವನ್ನು ತಪ್ಪಾಗಿ ಬಳಸದಂತೆ ಮಂಡಳಿಯು ಮನವಿ ಮಾಡಿದೆ.

- Advertisement -

ಈ ಬಗ್ಗೆ ಫೇಸ್‌ಬುಕ್‌ ಪೇಜ್‌’ನಲ್ಲಿ ಪೋಸ್ಟ್‌ ಹಾಕಿರುವ ಆಡಮ್ಸ್‌ ಮಂಡಳಿ, ‘ವರ್ಜೀನಿಯಾದ ADAMS ಮಸೀದಿಯಲ್ಲಿ, ಈದ್ ಪ್ರಾರ್ಥನೆಯ ಸಮಯದಲ್ಲಿ ಶುಕ್ರವಾರ, ಎ. 21 ರಂದು ನಡೆದ ಇತ್ತೀಚಿನ ಘಟನೆಯು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಮುಸ್ಲಿಂ ಸಮುದಾಯದ ಮಹಿಳೆಯಿಂದ ನಡೆದಿದೆ’ ಎಂದು ತಿಳಿಸಿದೆ.

Join Whatsapp