ಕಾಂಗ್ರೆಸ್ ಮೈತ್ರಿಯ AIUDF ಅಧಿಕಾರಕ್ಕೆ ಬಂದರೆ ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬ ವೀಡಿಯೋ ವೈರಲ್ । ವಾಸ್ತವವೇನು ?

Prasthutha|

- Advertisement -

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸುವುದಾಗಿ ಹೇಳುತ್ತಿದ್ದಾರೆ ಮತ್ತು ಅವರು ಅಧಿಕಾರಕ್ಕೆ ಬಂದರೆ ಯಾವುದೇ ಹಿಂದೂಗಳನ್ನು ಇಲ್ಲಿ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

https://twitter.com/Pranjeethz/status/1369332418302402562

ಹಲವಾರು ಟ್ವಿಟರ್ ಮತ್ತು ಫೇಸ್‌ಬುಕ್ ಬಳಕೆದಾರರು ಬಂಗಾಳಿ ಭಾಷೆಯಲ್ಲಿರುವ 36 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. “ಅಸ್ಸಾಂ ನಲ್ಲಿ ಅಧಿಕಾರಕ್ಕೆ ಬಂದರೆ ಹಿಂದೂಗಳನ್ನು ಜೀವಿಸಲು ಬಿಡುವುದಿಲ್ಲ ,ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುತ್ತೇವೆ “ ಎಂದು ಅಜ್ಮಲ್ ಹೇಳಿದ್ದಾರೆ ಎಂಬ ಶೀರ್ಷಿಕೆಯಡಿಯಲ್ಲಿ ಹರಿದಾಡುತ್ತಿತ್ತು. ಇದೇ ವೀಡಿಯೋವನ್ನು ಪ್ರಚೋದನಕಾರಿ ಭಾಷಣ, ಹೇಳಿಕೆಗಳಿಗಾಗಿ ಕುಖ್ಯಾತಿ ಪಡೆದಿರುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಟ್ವೀಟ್ ಮಾಡಿದ್ದರು.

- Advertisement -
https://twitter.com/ShobhaBJP/status/1369618186132357122

ಆದರೆ ನಕಲಿ ಸುದ್ದಿ ಪತ್ತೆ ದಳ ಈ ವೀಡಿಯೋದ ಸಂಪೂರ್ಣ ರೂಪವನ್ನು ಹೊರಬಿಟ್ಟಿದ್ದು , ಇದೊಂದು ಸುಳ್ಳು ಸುದ್ಧಿ ಎಂದು ಬಹಿರಂಗಪಡಿಸಿದೆ. ಅಲ್ಲಿ ಅಜ್ಮಲ್ ಅವರ ಮಾತನ್ನು ತಿರುಚಲಾಗಿದೆ ಎಂದು ಅದು ಹೇಳಿದೆ.

“ಮೊಘಲರು ಈ ದೇಶವನ್ನು 800 ವರ್ಷಗಳ ಕಾಲ ಆಳಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಎಲ್ಲರನ್ನೂ ಮುಸ್ಲಿಮರನ್ನಾಗಿ ಪರಿವರ್ತಿಸಬಹುದಿತ್ತು. ಈ ದೇಶವೇ ಇಸ್ಲಾಮಿಕ್ ರಾಷ್ಟ್ರವಾಗಿ ಅವರು ಬದಲಿಸುತ್ತಿದ್ದರು ” ಎಂದಾಗಿದೆ ಅಜ್ಮಲ್ ಹೇಳಿದ್ದು ಎಂದು ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ವರದಿ ಮಾಡಿದೆ.



Join Whatsapp