ಬೆಂಗಳೂರು: ವಿಶ್ವದ ಅತ್ಯಂತ ದೊಡ್ಡ ಮಾನವ ಸಂಪನ್ಮೂಲವನ್ನು ಹೊಂದಿರುವ ಭಾರತದಲ್ಲಿ ಅದರ ಅರ್ಧ ಭಾಗವಾಗಿರುವ ಮಹಿಳೆಯರು ತೀರಾ ಕಡೆಗಣಿಸಲ್ಪಡುತ್ತಿದ್ದಾಳೆ. ಮಹಿಳಾ ದೌರ್ಜನ್ಯದಲ್ಲೂ ರಾಜಕೀಯ- ಧಾರ್ಮಿಕ- ಕೋಮು ಹಿತಾಸಕ್ತಿಯೇ ಮುಖ್ಯವೆನಿಸುತ್ತದೆ. ದೌರ್ಜನ್ಯ ಕ್ಕೊಳಗಾಗುವ ಮಹಿಳೆಯರ ಪೈಕಿ ಬಹಳ ದೊಡ್ಡ ವರ್ಗಕ್ಕೆ ಅದರ ಅರಿವೇ ಇರುವುದಿಲ್ಲ ಎನ್ನುವುದು ದುರಂತ. ಈ ನಿಟ್ಟಿನಲ್ಲಿ ಜುಲೈ 1ರಿಂದ ಆಗಸ್ಟ್ 15ರವರೆಗೆ ನಡೆದ ‘ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮಗಳು, ಬಿತ್ತಿ ಪತ್ರ ಪ್ರದರ್ಶನ ,ವೆಬಿನಾರ್, ಪತ್ರಿಕಾಗೋಷ್ಠಿಗಳನ್ನು ನಡೆಸಲಾಗಿದೆ. ಇದೀಗ ಸಮಾರೋಪ ಕಾರ್ಯಕ್ರಮವಾಗಿ ರಾಜ್ಯಮಟ್ಟದ ವೆಬಿನಾರನ್ನು 15.08.23 ರಂದು ಸಂಜೆ ಮೂರು ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷೆ ಫಾತಿಮ ನಸೀಮರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವೆಬಿನಾರನ್ನು ವಿಮೆನ್ ಇಂಡಿಯ ಮೂವ್ಮೆಂಟ್ ರಾಷ್ಟ್ರೀಯ ಅಧ್ಯಕ್ಷೆ ಯಾಸ್ಮೀನ್ ಇಸ್ಲಾಮ್ ಉದ್ಘಾಟಿಸಲಿದ್ದಾರೆ. ಜ್ಯೋತಿ ಉಪನ್ಯಾಸಕರು ಮಹಾವೀರ ಕಾಲೇಜ್ ಮೈಸೂರು ,ಮುಝಾಹಿದ ಮಂಗಳೂರು ಚಿಂತಕಿ-ಬರಹಗಾರ್ತಿ , ಬಾರ್ಬರ ಬಾಯೆರ್ ಕ್ರಿಸ್ಟಾ ಮೈಸೂರು ಚಿಂತಕಿ – ಬರಹಗಾರ್ತಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.