ಟಿಪ್ಪರ್ ಹಾಯ್ದು ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಟಿಪ್ಪರ್ ಗೆ ಬೆಂಕಿ

Prasthutha|

ಕಲಬುರಗಿ: ಮರಳು ತುಂಬಿದ ಟಿಪ್ಪರ್ ಹಾಯ್ದು ಬಾಲಕ ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಜನರು ಟಿಪ್ಪರ್ ಗೆ ಬೆಂಕಿ ಇಟ್ಟ ಘಟನೆ ನಗರದ ಬಿದ್ದಾಪುರ ಬಡಾವಣೆಯ ಪ್ಲೈ ಓವರ್ ಬಳಿ ನಡೆದಿದೆ.

- Advertisement -

ಮನೀಷ್ ಮಲ್ಲಿಕಾರ್ಜುನ ಹರವಾಳಕರ್ (8) ಅಪಘಾತದಲ್ಲಿ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಮನೀಷ್ ತನ್ನ ತಾಯಿಯೊಂದಿಗೆ ಟೈಲರ್ ಅಂಗಡಿಗೆ ಹೋಗುವ ಸಂದರ್ಭ ರಸ್ತೆ ದಾಟುವಾಗ ಫ್ಲೈ ಓವರ್ ಮೇಲೆ ಹೈಕೋರ್ಟ್ ಕಡೆಯಿಂದ ಬಂದ ಮರಳು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಾಲಕನ ದೇಹ ನಜ್ಜುಗುಜ್ಜಾಗಿದೆ.

- Advertisement -

ಬಳಿಕ ಅಲ್ಲಿನ ಜನರು ಚಾಲಕನನ್ನು ಹಿಡಿದು ಥಳಿಸಲು ಮುಂದಾದರು. ಈ ವೇಳೆಗೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಜನರು ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp