ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ; ಸಿ ಎಂ ಬೊಮ್ಮಾಯಿ ಗೆ ಪ್ರೊ. ವರದೇಶ್‌ ಹಿರೇಗಂಗೆ ಪತ್ರ

Prasthutha|

ಬೆಂಗಳೂರು : ಇಂದು ಆರಂಭಗೊಂಡಿರುವ ಎಸೆಸೆಲ್ಸಿ ಪರೀಕ್ಷೆ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಕೋರಿ ಮಾಹೆಯ ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲೊಸಾಫಿಕಲ್‌ ಆರ್ಟ್ಸ್‌ ಆ್ಯಂಡ್ ಸಾಯನ್ಸಸ್‌ ಇದರ ನಿರ್ದೇಶಕರಾಗಿರುವ ಪ್ರೊ. ವರದೇಶ್‌ ಹಿರೇಗಂಗೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಹುಟ್ಟಿನಿಂದ ಹಿಂದೂ ಆಗಿರುವ ನಾನು, ನಿಮಗೆ, ಕರ್ನಾಟಕ ಹೈಕೋರ್ಟ್‌ ಹಾಗೂ ಶಿರವಸ್ತ್ರವಿರೋಧಿಸುವ ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತಿದ್ದೇನೆ- ನಿಮ್ಮ ಎಲ್ಲಾ ವಾದಗಳನ್ನು ಬದಿಗಿಟ್ಟು, ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಬೇಕು. ನಾವು ಶಿರವಸ್ತ್ರ ಕುರಿತ ಚರ್ಚೆಯನ್ನು ನಂತರ ಮುಂದುವರಿಸಬಹುದು, ಆದರೆ ಪರೀಕ್ಷೆ ಎದುರಿಸುತ್ತಿರುವ ಒಬ್ಬ  ವಿದ್ಯಾರ್ಥಿನಿಯು ಸರಕಾರ, ನ್ಯಾಯಾಲಯ, ತಮ್ಮ ಸಹಪಾಠಿಗಳಿಂದ ತಕ್ಷಣದ ಪರಿಹಾರಕ್ಕಾಗಿ ಎದುರು ನೋಡುತ್ತಾರೆ.ʼʼ

ʻʻಶಿರವಸ್ತ್ರ ಕುರಿತಂತೆ ನಾವು ಸೈದ್ಧಾಂತಿಕ, ಐತಿಹಾಸಿಕ, ಕಾನೂನಾತ್ಮಕ ಮತ್ತು ಧಾರ್ಮಿಕ ವಾದಗಳನ್ನು ಮಂಡಿಸಬಹುದು, ಆದರೆ  ಮೂಲಭೂತ ಮಾನವೀಯ ಮೌಲ್ಯಗಳು  ಸಮಯ, ಸ್ಥಳ, ಪ್ರಾಂತ್ಯ, ಧರ್ಮ, ಸಂಸ್ಕೃತಿ, ದೇಶ, ವಸ್ತ್ರಸಂಹಿತೆ ಮತ್ತು ನೀತಿ ಸಂಹಿತೆಯ ಪರಿಧಿಯಾಚೆಗೆ ನಿಲ್ಲುತ್ತದೆ ಎಂಬ ವಿಷಯದಲ್ಲಿ ನೀವು ಸಹಮತ ಹೊಂದಿದ್ದೀರಿ ಎಂದು ನಾನು ಭಾವಿಸುತೇನೆ ” ಎಂದು ಪ್ರೊ. ವರದೇಶ್‌ ಹಿರೇಗಂಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

ಪ್ರಾಯಶಃ ಮುಸ್ಲಿಂ ವಿದ್ಯಾರ್ಥಿನಿಯರು ಎರಡು ಅನಿವಾರ್ಯತೆಗಳ ನಡುವೆ ಇದ್ದಾರೆ. ಇಲ್ಲಿ ಅವರು ಸಂತ್ರಸ್ತರು. ಇದನ್ನು ಪರಿಗಣಿಸಿ ಸರಕಾರ, ನ್ಯಾಯಾಲಯ ಮತ್ತು ಹಿಂದೂ ಧರ್ಮ ಅವರನ್ನು ಈ ಬಿಕ್ಕಟ್ಟಿನಿಂದ ಹೊರತರಬೇಕು ಎಂದು ಆಗ್ರಹಿಸಿದ್ದಾರೆ.



Join Whatsapp