ಟೆಹ್ರಾನ್: ಇರಾನ್ ನ ಪ್ರಮುಖ ಬೌತ ಶಾಸ್ತ್ರಜ್ನ ಮತ್ತು ಕೋವಿಡ್ 19 ತಪಾಸಣೆಗೆ ದೇಶೀ ಪರೀಕ್ಷಾ ಕಿಟ್ ಗಳನ್ನು ಸಂಶೋಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಇರಾನ್ ನ ವಿಜ್ಞಾನಿ ಮೊಹಿಸಿನ್ ಫಖ್ರಿಝದೀಹ್ ಹತ್ಯೆ ನಡೆಸಿದ ಇಸ್ರೇಲ್ ಆಡಳಿತವು ಜಗತ್ತಿನಾದ್ಯಂತ ಹಲವು ವಿಜ್ಞಾನಿಗಳನ್ನು ಹತ್ಯೆಗೈದ ಇತಿಹಾಸವನ್ನು ಹೊಂದಿದೆ ಎಂದು ಪ್ರೆಸ್ ಟಿ.ವಿ ಪ್ರಕಟಿಸಿದೆ.
2018ರಲ್ಲಿ 35ರ ಹರೆಯದ ಫೆಲೆಸ್ತೀನಿಯನ್ ಸೈಂಟಿಸ್ಟ್ ಫದೀ ಅಲ್ ಬಾಶ್ ರನ್ನು ಮಲೇಷ್ಯ ರಾಜಧಾನಿ ಕೌಲಾಲುಂಪುರ್ ನಲ್ಲಿ ರಹಸ್ಯ ಕಾರ್ಯಚರಣೆ ನಡೆಸಿ ಇಸ್ರೇಲ್ ಕೊಂದು ಹಾಕಿತ್ತು. ಅಲ್ ಬಾಶ್ ಆಕ್ರಮಿತ ಗಾಝಾ ಪಟ್ಟಿಯಲ್ಲಿ ಎಲೆಕ್ಟ್ರೀಕಲ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದರು. ಅದೇ ವಿಷಯದಲ್ಲಿ ಪಿ.ಎಚ್.ಡಿ ಪಡೆಯುವುದಕ್ಕಾಗಿ ಮಲೇಶ್ಯಾಗೆ ಹೋಗಿದ್ದರು. ಅವರು ವಿದ್ಯುತ್ ವ್ಯವಸ್ಥೆ ವಿಷಯದ ಮೇಲೆ ವಿಶೇಷ ಜ್ನಾನವನ್ನು ಹೊಂದಿದ್ದರು ಮತ್ತು ಈ ವಿಷಯದ ಮೇಲೆ ಹಲವು ಪ್ರಬಂಧಗಳನ್ನು ಮಂಡಿಸಿದ್ದರು.
2016ರಲ್ಲಿ ಫೆಲೆಸ್ತೀನ್ ಪ್ರತಿರೋಧ ಸಂಘಟನೆ ಹಮಸ್ ನೊಂದಿಗೆ ಸಂಬಂಧ ಹೊಂದಿದ್ದರೆಂದು ಹೇಳಲಾಗುವ ತುನೀಶಿಯಾದ ವಾಯುಯಾನ ಇಂಜಿನಿಯರ್ ಹತ್ಯೆಯು ಮೊಸಾದ್ ಮೇಲೆ ಬೆಳಕು ಹರಿಸಿತ್ತು. ಮುಹಮ್ಮದ್ ಅಲ್ ಝವಾರಿ ರನ್ನು ತುನೀಶಿಯಾದ ಸಫಾಕ್ಸ್ ನಗರದಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
1967ರಲ್ಲಿ ಈಜಿಪ್ಟ್ ಅಣು ವಿಜ್ಞಾನಿ ಸಮೀರ್ ನಗ್ವಿಬ್ ರನ್ನು ಅಮೆರಿಕಾದಲ್ಲಿ ಕಾರು ಅಪಘಾತದಲ್ಲಿ ಕೊಲ್ಲಲಾಗಿತ್ತು. ನಗ್ವಿಬ್ ಸಾವನ್ನಪ್ಪುವ ಸಂದರ್ಭದಲ್ಲಿ ಅವರು ಇಸ್ರೇಲ್ ನೊಂದಿಗಿನ ಯುದ್ಧಕ್ಕಾಗಿ ಈಜಿಪ್ಟ್ ನ ಅಣು ಕಾರ್ಯಕ್ರಮಕ್ಕೆ ನೆರವಾಗುವುದಕ್ಕಾಗಿ ತವರಿಗೆ ಮರಳುವ ಯೋಜನೆಯನ್ನು ಹೊಂದಿದ್ದರು.
ಇನ್ನೋರ್ವ ಇರಾಕ್ ಅಣು ಯೋಜನೆಯ ನೇತೃತ್ವ ವಹಿಸಿದ್ದ ಈಜಿಪ್ಟ್ ನ ಅಣು ವಿಜ್ಞಾನಿ ಯಹ್ಯಾ ಅಲ್ ಮಶಾದ್ ರನ್ನು 1980ರಲ್ಲಿ ಪ್ಯಾರಿಸ್ ನ ಹೊಟೇಲ್ ನಲ್ಲಿ ಹತ್ಯೆಗಯ್ಯಲಾಗಿತ್ತು.