ಶಾಸಕ ಸಿದ್ದು ಸವದಿ ಎಳೆದಾಡಿದ್ದ ಮಹಾಲಿಂಗಪುರ ಪುರಸಭೆ ಸದಸ್ಯೆಗೆ ಗರ್ಭಪಾತ

Prasthutha|

ಬಾಗಲಕೋಟೆ : ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿಯ ಮಹಿಳಾ ಸದಸ್ಯೆಯೊಬ್ಬರನ್ನು ಶಾಸಕ ಸಿದ್ದು ಸವದಿ ಎಳೆದಾಡಿದ್ದುದು ದೊಡ್ಡ ಮಟ್ಟದ ಸುದ್ದಿಯಾಗಿದೆ. ಶಾಸಕ ಸಿದ್ದು ಸವದಿಯಿಂದ ತಳ್ಳಾಡಲ್ಪಟ್ಟ ಪುರಸಭಾ ಸದಸ್ಯೆ ಚಾಂದಿನಿ ನಾಯಕ್ ಗೆ ಈಗ ಗರ್ಭಪಾತ ಆಗಿರುವ ವಿಷಯ ಬೆಳಕಿಗೆ ಬಂದಿದೆ.

ನ.9ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ತಮಗೆ ಸ್ಥಾನ ಸಿಗದಿದ್ದುದಕ್ಕೆ ಆಕ್ರೋಶಿತರಾಗಿ, ಬಿಜೆಪಿಯ ಸದಸ್ಯೆಯರಾದ ಗೋದಾವರಿ, ಚಾಂದಿನಿ ನಾಯಕ್ ಮತ್ತು ಸವಿತಾ ಹುರಕಡ್ಲಿ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದರು.

- Advertisement -

ಇದು ತಿಳಿದು ಶಾಸಕ ಸಿದ್ದು ಸವದಿ ಮತ್ತು ಬಿಜೆಪಿ ಬೆಂಬಲಿಗರು ಮಹಿಳಾ ಸದಸ್ಯೆಯರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಮಹಿಳಾ ಸದಸ್ಯರನ್ನು ಎಳೆದಾಡಿದ ವೀಡಿಯೊ ವೈರಲ್ ಆಗಿತ್ತು.

ಈ ಎಳೆದಾಟದಲ್ಲಿ ಚಾಂದಿನಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗ ಗಾಯಗೊಂಡಿದ್ದ ಚಾಂದಿನಿ ನಾಯಕ್ ಮೂರು ತಿಂಗಳ ಗರ್ಭಿಣಿಯಾಗಿದ್ದು, ಅವರಿಗೆ ಈಗ ಗರ್ಭಪಾತವಾಗಿರುವುದಾಗಿ ವರದಿಗಳು ತಿಳಿಸಿವೆ.  

- Advertisement -