ಅದಾನಿ ಪ್ರಕರಣದ ತನಿಖೆಗೆ 6 ಸದಸ್ಯರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

Prasthutha|

ಹೊಸದಿಲ್ಲಿ: ಷೇರುಪೇಟೆಯಲ್ಲಿ ಅದಾನಿ ಗ್ರೂಪ್‌ ವಂಚನೆ ಎಸಗಿದೆ ಎಂಬ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ನೀಡಿದ ವರದಿಯ ಸತ್ಯಾಸತ್ಯತೆ ಪರಿಶೀಲಿಸಲು ಸುಪ್ರೀಂಕೋರ್ಟ್ ಆರು ಸದಸ್ಯರ ಸಮಿತಿಯನ್ನು ರಚಿಸಿದೆ.

- Advertisement -

ಸಮಿತಿಯ ನೇತೃತ್ವವನ್ನು ನಿವೃತ್ತ ನ್ಯಾಯಮೂರ್ತಿ ಎ.ಎಂ.ಸಪ್ರ ವಹಿಸಲಿದ್ದಾರೆ.

ಸಮಿತಿಯಲ್ಲಿ ಸೆಬಿಯ ಮಾಜಿ ಅಧ್ಯಕ್ಷ ಒ.ಪಿ. ಭಟ್‌, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾ| ಜೆ.ಪಿ. ದೇವಧರ್‌, ಕನ್ನಡಿಗರಾಗಿರುವ ಬ್ಯಾಂಕರ್‌ ಕೆ.ವಿ. ಕಾಮತ್‌, ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ, ಷೇರು ಪೇಟೆಯ ವಿಚಾರಗಳ ಪರಿಣತ ಮತ್ತು ನ್ಯಾಯವಾದಿ ಸೋಮಶೇಖರನ್‌ ಸುಂದರೇಶನ್‌ ಇರಲಿದ್ದಾರೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಹೇಳಿದೆ.

- Advertisement -

ನಿವೃತ್ತ ನ್ಯಾಯಮೂರ್ತಿ ಸಪ್ರ ನೇತೃತ್ವದ ಸಮಿತಿಗೆ ಕೇಂದ್ರ ಸರಕಾರ, ಕೇಂದ್ರ ವಿತ್ತ ಸಚಿವಾಲಯ, ಸೆಬಿ ಸೇರಿದಂತೆ ಎಲ್ಲ ಕಾನೂನಾತ್ಮಕ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆಯೂ ನ್ಯಾಯಪೀಠ ಸೂಚಿಸಿದೆ.



Join Whatsapp