ವೈದ್ಯಲೋಕವನ್ನು ಸಂಶಯಿಸುವ ಪ್ರಸಕ್ತ ವಿದ್ಯಮಾನಗಳಲ್ಲಿ ಯುನಾನಿ ಇಲಾಖೆಯ ಸೇವೆಗಳು ಶ್ಲಾಘನೀಯ: ಕೆ. ಎಂ. ಅಶ್ರಫ್

Prasthutha|

ಮಂಗಳೂರು: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಮಂಗಳೂರು ವೆಲ್ಫೇರ್ ಅಸೋಸಿಯೇಷನ್ (ಶಾದಿಮಹಲ್) ಸಂಯುಕ್ತ ಆಶ್ರಯದಲ್ಲಿ ಆಯುಷ್ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಯುನಾನಿ ದಿನಾಚರಣೆ-2022 ಅಂಗವಾಗಿ, ಬೃಹತ್ ಉಚಿತ ಯುನಾನಿ ವೈದ್ಯಕೀಯ ಶಿಬಿರ ಮತ್ತು ಹಿಜಾಮ ಚಿಕಿತ್ಸೆ ನಗರದ ಶಾದಿಮಹಲ್ ಬೋಳಾರದಲ್ಲಿ ನಡೆಯಿತು.

- Advertisement -

ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಯುಷ್ ಇಲಾಖೆಯ ಜನಪರವಾದ ಯೋಜನೆಗಳನ್ನು ಸದುಪಯೋಗಿಸುವಂತೆ ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಯುನಾನಿ ವಿಭಾಗದ ಉಪಮುಖ್ಯ ವೈದ್ಯಾಧಿಕಾರಿ ಡಾ. ಝಾಹಿದ್ ಹುಸೇನ್ , ಹಿಜಾಮದ ಅಗತ್ಯ ಮತ್ತು ಪ್ರಯೋಜನಗಳನ್ನು ಶಿಬಿರದ ಮುಂದಿಟ್ಟರು. ಜಮಾಅತೆ ಇಸ್ಲಾಮೀ ಹಿಂದ್ ನಗರ ಶಾಖೆಯ ಅಧ್ಯಕ್ಷರಾದ ಜನಾಬ್ ಕೆ. ಎಂ. ಅಶ್ರಫ್ ಮಾತಾಡುತ್ತಾ, ವೈದ್ಯಕೀಯ ಲೋಕದ ಕುರಿತು ಸಂಶಯಿಸುವ ಪ್ರಸಕ್ತ ವಿದ್ಯಮಾನಗಳಲ್ಲಿ, ಆಯುಷ್ ಇಲಾಖೆಯ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದರು. ಮಂಗಳೂರು ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ಯೂಸುಫ್ ಕರ್ ದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಸೇವಾ ಘಟಕದ ಸಂಚಾಲಕರಾದ ಅಬ್ದುಲ್ ಗಫೂರ್ ಕುಳಾಯಿ ಸ್ವಾಗತಿಸಿದರು. ಉಪಮುಖ್ಯ ವೈದ್ಯಾಧಿಕಾರಿ, ಸರಕಾರಿ ಆಯುರ್ವೇದ ಆಸ್ಪತ್ರೆ, ಬಳ್ಕುಂಜೆಯ ಡಾ. ಶೋಭಾರಾಣಿ ಧನ್ಯವಾದ ಅರ್ಪಿಸಿದರು. ಹೆಚ್. ಆರ್. ಎಸ್. ಮಂಗಳೂರು ಗ್ರೂಪ್ ಲೀಡರ್ ಕೆ. ಎಂ. ಕಾಸಿಮ್ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.



Join Whatsapp