ಕರ್ನಾಟಕದ ಆಪರೇಷನ್ ಕಮಲದ ರಹಸ್ಯವೂ ಬಯಲು: ಕಾಂಗ್ರೆಸ್

Prasthutha|

ಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ?

- Advertisement -

ಬೆಂಗಳೂರು: ಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ? ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹಸಚಿವ ಅಮಿತ್ ಶಾ, ಬಿ.ಎಲ್. ಸಂತೋಷ್ ಅವರುಗಳ ಹೆಸರುಗಳು ಬಹಿರಂಗವಾಗಿದೆ, ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ತೆಲಂಗಾಣದಲ್ಲಿ 150 ಕೋಟಿಯ ಆಪರೇಷನ್ ಕಮಲದ ಡೀಲ್ ನಲ್ಲಿ ಸಿಕ್ಕಿಬಿದ್ದವರು ಕರ್ನಾಟಕದ ಕುದುರೆ ವ್ಯಾಪಾರದಲ್ಲೂ ಪಾತ್ರ ವಹಿಸಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಬಿ ಎಲ್ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ, ಕುದುರೆ ವ್ಯಾಪಾರದಲ್ಲಿ ಸಂತೋಷ ಕೂಟದ ನೇತೃತ್ವ ಇದ್ದಿದ್ದಕ್ಕೆ ಬಿ.ಎಸ್. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದೇ? ಎಂದು ಪ್ರಶ್ನಿಸಿದೆ.

Join Whatsapp